Ambedkar hall ನವನಗರ ಅಂಬೇಡ್ಕರ್ ಭವನ ಅವ್ಯವಸ್ಥೆ

Ambedkar hall ಹುಬ್ಬಳ್ಳಿಯ ನವನಗರದಲ್ಲಿರುವ ಡಾ. ಬಿ.ಆರ್​. ಅಂಬೇಡ್ಕರ್​ ಭವನ.
Ambedkar hall ಹುಬ್ಬಳ್ಳಿಯ ನವನಗರದಲ್ಲಿರುವ ಡಾ. ಬಿ.ಆರ್​. ಅಂಬೇಡ್ಕರ್​ ಭವನ.
Published on

ಪ್ರಮುಖ ಮುಖ್ಯಾಂಶಗಳು

  • ನಿರ್ವಹಣೆ ಇಲ್ಲದೇ ಸೊರಗಿದ ತಾಣ
  • ನಿಗಾ ವಹಿಸಲು ಮಹಾನಗರ ಪಾಲಿಕೆಗೆ ಆಗ್ರಹ
ಹುಬ್ಬಳ್ಳಿ: Ambedkar hall ಇಲ್ಲಿಯ ನವನಗರದ ಮಧ್ಯ ಭಾಗದಲ್ಲಿರುವ ಭಾರತರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಭವನ ಸಮರ್ಪಕ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಗೂಡಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇತ್ತೀಚೆಗೆ ಇದನ್ನು ದುರಸ್ತಿ ಮಾಡಿಸಿದ್ದರೂ ಯಾವುದೇ ಕಾರ್ಯಕ್ರಮಗಳು ನಡೆಯದೇ ಬೀಕೋ ಎನ್ನುತ್ತಿದೆ. ರಾತ್ರಿಯಾದರೆ ಇಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗುತ್ತಿದೆ. ಕೆಲವರು ಅಲ್ಲಿಯೇ ಕುಳಿತು ಮದ್ಯ ಸೇವನೆ, ಸಿಗರೇಟ್​ ಸೇದುವುದು ಮಾಡಿ ಗಲೀಜು ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ನವನಗರದ ವಲಯ ಕಚೇರಿ ಪಕ್ಕದಲ್ಲಿಯೇ ಇದ್ದರೂ ಅಂಬೇಡ್ಕರ್​ ಭವನದ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನವನಗರದ ಡಾ. ಬಿ.ಆರ್​. ಅಂಬೇಡ್ಕರ್​ ಭವನವನ್ನು ಸ್ವಚ್ಛಗೊಳಿಸಬೇಕು.
ರಾತ್ರಿ ವೇಳೆ ಯಾರೂ ಪ್ರವೇಶ ಮಾಡದಂತೆ ನಿಗಾ ವಹಿಸಬೇಕು. ಭವನವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಮಾದಿಗರ ಸಂಘದ ಅಧ್ಯಕ್ಷ ಕಲ್ಲಪ್ಪ ದು. ಬ್ಯಾಟಣ್ಣವರ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net