ಅಮರ ಕಾಳೆ 2 ಗಿನ್ನೀಸ್​ ವಿಶ್ವ ದಾಖಲೆ

ಅಮರ ಕಾಳೆ
ಅಮರ ಕಾಳೆ
Published on

ಧಾರವಾಡ: ನಗರದ ಯುವ ಕಲಾವಿದ ಅಮರ ರಾಜು ಕಾಳೆ 2 ಗಿನ್ನೀಸ್​ ವಿಶ್ವ ದಾಖಲೆಗಳಿಗೆ ಭಾಜನರಾಗಿದ್ದಾರೆ. ಅರಿಷಿಣ ಪುಡಿ ಮತ್ತು ಮೆಣಸಿನ ಪುಡಿ ಬಳಸಿ ಕರ್ನಾಟಕ ಭೂಪಟದಲ್ಲಿ ಹಂಪಿ ಕಲ್ಲಿನ ರಥದ ಚಿತ್ರವನ್ನು 1,892 ಚದರ ಅಡಿ ವಿಸ್ತೀರ್ಣದಲ್ಲಿ ರಚಿಸಿದ್ದರು. ಅಲ್ಲದೆ, ಬಾಯಲ್ಲಿ ಕುಂಚ ಹಿಡಿದು 1,209 ಚದರ ಅಡಿ ಕ್ಯಾನ್ವಾಸ್​ ಮೇಲೆ ಚಿತ್ರ ರಚಿಸಿ ವಿಶ್ವದ ಅತಿ ದೊಡ್ಡ ಮೌತ್​ ಪೇಂಟಿಂಗ್​ ದಾಖಲೆ ನಿಮಿರ್ಸಿದ್ದಾರೆ. ನಿರಂತರ ಸುಮಾರು 14 ಗಂಟೆಗಳಲ್ಲಿ ಆಪರೇಷನ್​ ಸಿಂಧೂರ್​ ಸೈನಿಕನನ್ನು ಚಿತ್ರಿಸಿದ್ದರು. ಇದನ್ನು ಪರಿಗಣಿಸಿ ಗಿನ್ನೀಸ್​ ದಾಖಲೆಯಲ್ಲಿ ಅಮರ ಹೆಸರು ಸೇರ್ಪಡೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net