ಪೂರ್ವ-ಪಾಶ್ಚಿಮಾತ್ಯ ಸಾಹಿತ್ಯ ಸಮನ್ವಯಗೊಳಿಸಿದ ವಿ.ಕೃ. ಗೋಕಾಕ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಶಿಧರ ನರೇಂದ್ರ ಮಾತನಾಡಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಶಿಧರ ನರೇಂದ್ರ ಮಾತನಾಡಿದರು.
Published on
ಧಾರವಾಡ: ವಿ.ಕೃ. ಗೋಕಾಕರ ಅವರಿಗೆ ಪೂರ್ವ ಮತ್ತು ಪಾಶ್ಚಿಮಾತ್ಯ ಸಾಹಿತ್ಯವನ್ನು ಸಮನ್ವಯ ಗೊಳಿಸಿದ ಕೀತಿರ್ ಅವರಿಗೆ ಸಲ್ಲುತ್ತದೆ ಎಂದು ಸಾಂಸತಿಕ ಚಿಂತಕ ಡಾ. ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ರಾಣಿಚನ್ನಮ್ಮ ನಗರದ ಧಾರವಾಡ ಕಟ್ಟೆ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಜ್ಞಾನಪೀಠ ಪ್ರಶಸ್ತಿ ಪುರಸತ ವಿ. ಕೃ. ಗೋಕಾಕರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 426ನೇ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರತಿಭೆಯಾಗಿ ಗುರುತಿಸಿಕೊಂಡ ವಿ.ಕೃ. ಗೋಕಾಕರು ಕವಿ, ಕಾದಂಬರಿಕಾರ, ವಿಮರ್ಶಕ, ಚಿಂತಕ, ಶಿಕ್ಷಣತಜ್ಞ, ಆಡಳಿತಗಾರರಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರು. ಕನ್ನಡ ಮತ್ತು ಇಂಗ್ಲಿಷ್​ ಸಾಹಿತ್ಯ ಎರಡರಲ್ಲಿಯೂ ಅಪಾರ ಪಾಂಡಿತ್ಯ ಹೊಂದಿದ್ದರು ಎಂದು ಸ್ಮರಿಸಿದರು.
ಧಾರವಾಡದ ಕನ್ನಡ ಪ್ರಾಧ್ಯಾಪಕ ಡಾ. ಚಿದಾನಂದ ಮಾಸನಕಟ್ಟಿ ಮಾತನಾಡಿ, "ವಿ.ಕೃ. ಗೋಕಾಕರ ತ್ರಿವಿಕ್ರಮರ ಆಕಾಶಗಂಗೆ' ಕೃತಿಯು ಕನ್ನಡ ಸಾಹಿತ್ಯದ ಚಂಪೂ ಪರಂಪರೆಯಲ್ಲಿ ಗಮನಾರ್ಹವಾದ ಕೃತಿಯಾಗಿದೆ. ಇದನ್ನು ಕೇವಲ ಪ್ರಾಚಿನ ಚಂಪೂ ಶೈಲಿಯ ಅನುಕರಣೆಯಾಗಿ ನೋಡದೆ, ಆಧುನಿಕ ಸಂವೇದನೆ, ಹೊಸ ಕಾವ್ಯಭಾಷೆ, ಪೌರಾಣಿಕ ವಸ್ತು ಮತ್ತು ಸಮಕಾಲೀನ ಜೀವನದೃಷ್ಟಿ ಸಮನ್ವಯಗೊಳಿಸಿದ ಹೊಸ ಬಗೆಯ ಚಂಪೂ ಕಾವ್ಯವೆಂದು ಗುರುತಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕಟ್ಟೆಯ ಪ್ರೊ. ಬಸವರಾಜ ಡೋಣೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಪೊಲೀಸ್​ ಪಾಟೀಲ, ಪ್ರೊ. ಮುಕುಂದ ಲಮಾಣಿ, ಪ್ರತಿಕ್​ ಕೆರೂರ, ಮುತ್ತು ಮಠಪತಿ, ಮನೋಜ್​, ಡಾ. ವಿಜಯಲಕ್ಷ್ಮೀ ದಾನರಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net