ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ, ಧಾರವಾಡ ಹಾಗೂ ಧಾರವಾಡ ಹೊಟೆಲ್ ಒಡೆಯರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಗುಜರಾತ್ನ ಗಾರ್ಬಾ ಮತ್ತು ದಾಂಡಿಯಾ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ, ಪುರುಲಿಯಾ ಸಿಂಹ ನೃತ್ಯ ಸಾಂಸತಿಕ ವೈಭವದ ವಿಶೇಷತೆಗಳಾಗಿವೆ ಎಂದರು.