(akshaya tiritiya) ಅಕ್ಷಯ ತೃತೀಯಕ್ಕೆ 2.5 ಕೆಜಿ ಚಿನ್ನ ಖರೀದಿ

ಹುಬ್ಬಳ್ಳಿಯ ಪರುಷೋತ್ತಮ ನಾರಾಯಣ ಗಾಡ್ಗಿಳ್ (ಪಿಎನ್‌ಜಿ) ಸರಾಫ್ ಮತ್ತು ಜುವೆಲರ್ಸ್‌ನಲ್ಲಿ ಅಕ್ಷಯ ತೃತೀಯ ನಿಮಿತ್ತ ಗ್ರಾಹಕರು ಸೋಮವಾರ ಚಿನ್ನ ಖರೀದಿಸಿದರು(akshaya tiritiya).
ಹುಬ್ಬಳ್ಳಿಯ ಪರುಷೋತ್ತಮ ನಾರಾಯಣ ಗಾಡ್ಗಿಳ್ (ಪಿಎನ್‌ಜಿ) ಸರಾಫ್ ಮತ್ತು ಜುವೆಲರ್ಸ್‌ನಲ್ಲಿ ಅಕ್ಷಯ ತೃತೀಯ ನಿಮಿತ್ತ ಗ್ರಾಹಕರು ಸೋಮವಾರ ಚಿನ್ನ ಖರೀದಿಸಿದರು(akshaya tiritiya).
Published on
ಹುಬ್ಬಳ್ಳಿ: ಅಕ್ಷಯ ತೃತೀಯ (akshaya tiritiya) ನಿಮಿತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾನುವಾರ ಮತ್ತು ಸೋಮವಾರ ಸೇರಿ ಒಟ್ಟಾರೆ 2.5 ಕೆಜಿ ಚಿನ್ನವನ್ನು ಗ್ರಾಹಕರು ಖರೀದಿ ಮಾಡಿದ್ದಾರೆ.
ನಗರದ ಬ್ರಾಡ್‌ವೇ, ಸಿಬಿಟಿ, ಸರಾಫ್‌ಗಟ್ಟಿ ಸೇರಿ ಇತರೆಡೆ ಚಿನ್ನದ ಅಂಗಡಿಗಳಲ್ಲಿ ನಿನ್ನೆಗಿಂತ ಇಂದು ಬಹಳಷ್ಟು ಗ್ರಾಹಕರು ಸೇರಿದ್ದರು. ಬಸವ ಜಯಂತಿ ನಿಮಿತ್ತ ಮೂರುಸಾವಿರ ಮಠ ಹಾಗೂ ಶ್ರೀ ಸಿದ್ಧಾರೂಢ ಮಠಕ್ಕೆ ಭಕ್ತರು ಆಗಮಿಸಿದ್ದರು. ಬಸವ ಜಯಂತಿಯಂದೇ ಅಕ್ಷಯ ತೃತೀಯ ಇರುತ್ತದೆ ಎಂದು ನಂಬಿರುವ ಗ್ರಾಹಕರ, ಇಂದು ಸಹ 1.3 ಕೆಜಿ ಬಂಗಾರ ಖರೀದಿದ್ದಾರೆ. ನಿನ್ನೆ 1.2 ಕೆಜಿ ಚಿನ್ನ ಖರೀದಿ ಪ್ರಕ್ರಿಯೆ ನಡೆದಿತ್ತು. ಎರಡು ದಿನದಲ್ಲಿ ಒಟ್ಟು 20 ಕೆಜಿ ಬೆಳ್ಳಿ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ ಎಂದು ಉತ್ತರ ಕರ್ನಾಟಕ ಜುವೆಲರ್ಸ್ ಸಂಘಗಳ ಅಧ್ಯಕ್ಷ ಗೋವಿಂದ ನಿರಂಜನ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net