Akshaya Patra ಮೂಲಸೌಕರ್ಯ ಹೆಚ್ಚಿಸಿಕೊಂಡ ಅಕ್ಷಯಪಾತ್ರ

ಹುಬ್ಬಳ್ಳಿ ಅಕ್ಷಯಪಾತ್ರದ (Akshaya Patra) ಅಡುಗೆ ಮನೆಯಲ್ಲಿ ಅಳವಡಿಸಿದ ಅತ್ಯಾಧುನಿಕ ಉಪಕರಣಗಳ ಉದ್ಘಾಟನೆ ಸಮಾರಂಭದಲ್ಲಿ ಮೈಕ್ರೋಫಿನಿಶ್ ಗ್ರುಪ್ ಅಧ್ಯಕ್ಷ ತಿಲಕ ವಿಕಂಶಿ, ನಿರ್ದೇಶಕ ಮಹೇಂದ್ರ ವಿಕಂಶಿ, ಧಾರವಾಡದ ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಲೋಚನದಾಸ, ರಾಮಗೋಪಾಲ ದಾಸ, ಇತರರು ಭಾಗವಹಿಸಿದ್ದರು.
ಹುಬ್ಬಳ್ಳಿ ಅಕ್ಷಯಪಾತ್ರದ (Akshaya Patra) ಅಡುಗೆ ಮನೆಯಲ್ಲಿ ಅಳವಡಿಸಿದ ಅತ್ಯಾಧುನಿಕ ಉಪಕರಣಗಳ ಉದ್ಘಾಟನೆ ಸಮಾರಂಭದಲ್ಲಿ ಮೈಕ್ರೋಫಿನಿಶ್ ಗ್ರುಪ್ ಅಧ್ಯಕ್ಷ ತಿಲಕ ವಿಕಂಶಿ, ನಿರ್ದೇಶಕ ಮಹೇಂದ್ರ ವಿಕಂಶಿ, ಧಾರವಾಡದ ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಲೋಚನದಾಸ, ರಾಮಗೋಪಾಲ ದಾಸ, ಇತರರು ಭಾಗವಹಿಸಿದ್ದರು.
Published on
ಮೈಕ್ರೋಫಿನಿಶ್ ಗ್ರುಪ್​ನ ಸಿಎಸ್​ಆರ್ ನೆರವಿನೊಂದಿಗೆ ಅಡುಗೆ ಮನೆಯಲ್ಲಿ 8 ಡಬಲ್ ಜಾಕೆಟ್ಡ್ ಸ್ಟೀಮ್ ಚಾಲಿತ ಸಾಂಬಾರ ಕೌಲ್ಡನ್​ಗಳು ಮತ್ತು 10 ಸ್ಟೀಮ್ ಚಾಲಿತ ರೈಸ್ ಕೌಲ್ಡನ್​ಗಳನ್ನು ಅಳವಡಿಸಲಾಗಿದೆ.
ಅಕ್ಷಯ ಪಾತ್ರ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೈಕ್ರೋಫಿನಿಶ್ ಗ್ರುಪ್ ಅಧ್ಯಕ್ಷ ತಿಲಕ ವಿಕಂಶಿ, ನಿರ್ದೇಶಕ ಮಹೇಂದ್ರ ವಿಕಂಶಿ ಹಾಗೂ ಧಾರವಾಡದ ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಲೋಚನದಾಸ ಭಾಗವಹಿಸಿದ್ದರು.
ಅಡುಗೆ ಮನೆಯಲ್ಲಿ ಅಳವಡಿಸಿರುವ ನೂತನ ಸೌಲಭ್ಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ಇಸ್ಕಾನ್ ಹುಬ್ಬಳ್ಳಿಯ ಕಾರ್ಯದರ್ಶಿ ರಾಮಗೋಪಾಲ ದಾಸ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಉನ್ನತ ಗುಣಮಟ್ಟ ಕಾಯ್ದುಕೊಳ್ಳಲು ಈ ಅತ್ಯಾಧುನಿಕ ಉಪಕರಣಗಳು ಸಹಾಯವಾಗಲಿವೆ ಎಂದರು.
ಅಕ್ಷಯ ಪಾತ್ರ ಪ್ರತಿಷ್ಠಾನದಿಂದ ನಿತ್ಯ ಧಾರವಾಡ ಜಿಲ್ಲೆಯ 1.30 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸಲಾಗುತ್ತಿದೆ. ಬೆಳಗಿನಜಾವ 4 ಗಂಟೆಯಿಂದಲೇ ಅಡುಗೆ ತಯಾರಿ ಆರಂಭಗೊಳ್ಳುತ್ತದೆ. 350ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅಡುಗೆ ತಯಾರಿಗಾಗಿಯೇ 140 ಸಿಬ್ಬಂದಿ ಇದ್ದಾರೆ. ಇಸ್ಕಾನ್ ಹುಬ್ಬಳ್ಳಿ ಘಟಕದ ಅಡುಗೆ ಮನೆ ಏಷಿಯಾದಲ್ಲಿಯೇ ದೊಡ್ಡದು ಎಂದು ತಿಳಿಸಿದರು.
ನೂತನ ಉಪಕರಣದಲ್ಲಿ 15 ನಿಮಿಷಗಳಲ್ಲಿ 1 ಕ್ವಿಂಟಾಲ್ ಅನ್ನ ಸಿದ್ಧಗೊಳ್ಳುತ್ತದೆ. ಚಪಾತಿ ತಯಾರಿಸಲು 2 ಉಪಕರಣಗಳಿದ್ದು, ಒಂದು ಉಪಕರಣದಲ್ಲಿ 1 ತಾಸಿಗೆ 20 ಸಾವಿರ ಚಪಾತಿ ಸಿದ್ಧಗೊಳ್ಳುತ್ತವೆ. ವಾರಕ್ಕೆ ಒಂದು ದಿನ ಮಕ್ಕಳಿಗೆ ಚಪಾತಿ ನೀಡಲಾಗುತ್ತದೆ ಎಂದು ಹೇಳಿದರು.
ತಯಾರಾದ ಅಡುಗೆಯನ್ನು ವಿವಿಧ ಶಾಲೆಗಳಿಗೆ ತಲುಪಿಸಲು 80 ವಾಹನಗಳಿವೆ. ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net