ಗ್ರಾಮೀಣ ಪ್ರದೇಶದ ಯುವಕರನ್ನು ಉದ್ಯಮ ಪ್ರಾರಂಭಕ್ಕೆ ಉತ್ತೇಜಿಸಲಾಗುತ್ತಿದೆ.
ಬಹುದೊಡ್ಡ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ.
ದೇಶಪಾಂಡೆ ಫೌಂಡೇಶನ್ನ ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ‘ಡೆವಲಪ್ಮೆಂಟ್ ಡೈಲಾಗ್‘ನ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದರು.
ದೇಶಪಾಂಡೆ ಫೌಂಡೇಶನ್ನ ಯಶಸ್ವಿ ಕೌಶಲ ಮಾದರಿಯನ್ನು ದೇಶದಾದ್ಯಂತ ಇರುವ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ದೇಶಪಾಂಡೆ ಫೌಂಡೇಶನ್ನ ಕೌಶಲ ಕೇಂದ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ವಿಶೇಷವಾಗಿ ಯುವತಿಯರು ಕೆಲವೇ ತಿಂಗಳಲ್ಲಿ ಪಡೆದ ತರಬೇತಿ ನಂತರ ಅತ್ಯುತ್ತಮ ಆತ್ಮವಿಶ್ವಾಸ ಮತ್ತು ಇಂಗ್ಲಿಷ್ ಭಾಷಾ ಪ್ರಭುತ್ವ ಅಳವಡಿಸಿಕೊಂಡಿರುವುದನ್ನು ಶ್ಲಾಘಿಸಿದರು.
ಉದ್ಯೋಗಾವಕಾಶದ ಗಂಭೀರ ಸಮಸ್ಯೆ ಕುರಿತು ಮಾತನಾಡಿದ ಅವರು, ಭಾರತವು 4.6 ಕೋಟಿ ವಿದ್ಯಾರ್ಥಿಗಳೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದರೂ ಬಹುದೊಡ್ಡ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿ ವರ್ಷ ಅಂದಾಜು ಒಂದು ಕೋಟಿ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಆದರೆ, ಅವರಲ್ಲಿ ಕೇವಲ ಶೇ. 56ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ.
ನಿರುದೊ್ಯೕಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನವಾಗಬೇಕಿದೆ. ಕೈಗಾರಿಕೆಗಳಿಗೆ ಅಗತ್ಯವಿರುವ ಭಾಷೆ, ಸಂವಹನ ಮತ್ತು ಆತ್ಮವಿಶ್ವಾಸದ ಕೊರತೆ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ಈ ಸಮಸ್ಯೆ ನಿವಾರಣೆಗೆ ದೇಶಪಾಂಡೆ ಫೌಂಡೇಶನ್ನಂತಹ ಸಂಸ್ಥೆಗಳ ಪಾತ್ರ ಬಹಳ ದೊಡ್ಡದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದೇಶಪಾಂಡೆ ಫೌಂಡೇಶನ್ ಯೋಜನೆ ಇತರ ವಿಶ್ವವಿದ್ಯಾಲಯಗಳಿಗೂ ವಿಸ್ತರಿಸುವಂತಾಗಬೇಕು ಎಂದರು.
ಪದ್ಮಶ್ರೀ ಪುರಸ್ಕೃತ, ಸೈಯಂಟ್ ಸಂಸ್ಥಾಪಕ ಡಾ. ಬಿ.ವಿ.ಆರ್. ಮೋಹನ ರೆಡ್ಡಿ ಮಾತನಾಡಿ, ದೇಶಪಾಂಡೆ ಫೌಂಡೇಶನ್ ಭಾರತದ ಸಾಮಾಜಿಕ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಪರಿವರ್ತನಾತ್ಮಕ ಪರಿಣಾಮ ಬೀರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರನ್ನು ಉದ್ಯಮ ಪ್ರಾರಂಭಕ್ಕೆ ಉತ್ತೇಜಿಸಲಾಗುತ್ತಿದೆ. ಸಂವಹನ ಕಲೆ, ಇಂಗ್ಲಿಷ್ ಭಾಷೆ ಹಿಡಿತ ಸೇರಿದಂತೆ ಇತರ ಕೌಶಲಗಳನ್ನು ಕಲಿಸಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ಜಯಶ್ರೀ ದೇಶಪಾಂಡೆ ಅವರು ಮಹಿಳಾ ಉದ್ಯೋಗಿಗಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ದೇಶಪಾಂಡೆ ಫೌಂಡೇಶನ್ ವತಿಯಿಂದ ಕೈಗೊಂಡಿರುವ ನೀರಿನ ಸಂರಕ್ಷಣೆ, ಕೃಷಿ ಉತ್ತೇಜನ ಸೇರಿದಂತೆ ಇತರ ಕಾರ್ಯಗಳನ್ನು ಫೌಂಡೇಶನ್ ಸಿಇಒ ಆನಂದ ವಿವರಿಸಿದರು.