Air service ಹುಬ್ಬಳ್ಳಿಯಿಂದ ನೇರ ವಿಮಾನ ಸೇವೆ

Air service ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ನೇರ ವಿಮಾನ ಸೇವೆ ಆರಂಭಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಹೇಂದ್ರ ಸಿಂಘಿ, ಗೌತಮ್​ ಗುಲೆಚ್ಛಾ, ಅಭಯ ಸೂಜಿ, ಸುಭಾಷ್​ ಡಂಕ್​, ಇದ್ದರು.
Air service ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ನೇರ ವಿಮಾನ ಸೇವೆ ಆರಂಭಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಹೇಂದ್ರ ಸಿಂಘಿ, ಗೌತಮ್​ ಗುಲೆಚ್ಛಾ, ಅಭಯ ಸೂಜಿ, ಸುಭಾಷ್​ ಡಂಕ್​, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಜೋಶಿಗೆ ಮನವಿ
  • ಹುಬ್ಬಳ್ಳಿಯಿಂದ ವಾರಾಣಸಿಗೆ ನೇರ ವಿಮಾನ

ಹುಬ್ಬಳ್ಳಿ: Air service ಉತ್ತರ ಕರ್ನಾಟಕದ ವಾಯುಯಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಬೇಕೆಂದು ಪ್ರಧಾನಮಂತ್ರಿ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಿತು.

ಕೇಂದ್ರದಲ್ಲಿ ಶಿಕ್ಷಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ದೊರೆತಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ವಿವಿಧ ಬೇಡಿಕೆಗಳ ಪಟ್ಟಿ ಮಂಡಿಸಲಾಯಿತು.

ಹುಬ್ಬಳ್ಳಿಯಿಂದ ಅಹಮದಾಬಾದ್​, ಜೋಧಪುರ ಹಾಗೂ ವಾರಾಣಸಿಗೆ ನೇರ ವಿಮಾನ ಸೇವೆ ಆರಂಭಿಸುವಂತೆ ನಿಯೋಗ ಒತ್ತಾಯಿಸಿತು.

ಉತ್ತರ ಕರ್ನಾಟಕದ ಸಾವಿರಾರು ಜನರು ಗುಜರಾತ್​, ರಾಜಸ್ಥಾನ ಹಾಗೂ ದೇಶದ ಪ್ರಮುಖ ನಗರಗಳೊಂದಿಗೆ ವ್ಯಾಪಾರ, ಉದ್ಯಮ, ಸಾಮಾಜಿಕ, ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದಾರೆ.
ಪ್ರಸ್ತುತ ಈ ನಗರಗಳಿಗೆ ನೇರ ವಿಮಾನ ಸಂಪರ್ಕ ಇಲ್ಲದ ಕಾರಣ ಪ್ರಯಾಣಿಕರು ಇತರ ನಗರಗಳ ಮೂಲಕ ಸಂಚರಿಸಬೇಕಾಗಿದೆ. ಇದರಿಂದ ಸಮಯ ಹಾಗೂ ಪ್ರಯಾಣ ವೆಚ್ಚ ಹೆಚ್ಚಾಗುತ್ತಿದೆ ಎಂದು ನಿಯೋಗ ತಿಳಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ಸಿಂಘಿ, ಹುಬ್ಬಳ್ಳಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಪ್ರಮುಖ ವಾಯು ಸಂಪರ್ಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ ಆರಂಭವಾದರೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಪಠ್ಯಪುಸ್ತಕ

ಕೇಂದ್ರ ಶಿಕ್ಷಣ ಸಚಿವರೂ ಆದ ಜೋಶಿ ಅವರಿಗೆ ಸಿಬಿಎಸ್​ಇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಒದಗಿಸಲು ಮನವಿ ಮಾಡಲಾಯಿತು. ಸಿಬಿಎಸ್​ಇ ವಿವಿಧ ತರಗತಿಗಳ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಲಭ್ಯವಾಗದಿರುವ ಸಮಸ್ಯೆಯನ್ನೂ ನಿಯೋಗವು ಕೇಂದ್ರ ಸಚಿವರ ಗಮನಕ್ಕೆ ತಂದಿತು.

ಮಹಾವೀರ ಲಿಂಬ್​ ಸೆಂಟರ್​ನ ಅಧ್ಯಕ್ಷ ಗೌತಮ್​ ಗುಲೆಚ್ಛಾ, ಲಯನ್ಸ್​ ಕ್ಲಬ್​ ಆಫ್​ ಹುಬ್ಬಳ್ಳಿ ಪರಿವಾರದ ಅಭಯ ಸೂಜಿ, ಪ್ರವಾಸಿ ಟ್ರಾವೆರ್ಲಸ್​ ಅಸೋಸಿಯೇಷನ್​ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಸುಭಾಷ್​ ಚಂದ್ರ ಡಂಕ್​, ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net