(ahinda) ಸಿದ್ದರಾಮಯ್ಯ 2028ರವರೆಗೆ ಮುಂದುವರಿಯಲಿ

ಅಹಿಂದ (ahinda) ಕರ್ನಾಟಕ ರಾಜ್ಯ ಒಕ್ಕೂಟದಿಂದ ಹುಬ್ಬಳ್ಳಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಹಿಂದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಲಾಯಿತು.
ಅಹಿಂದ (ahinda) ಕರ್ನಾಟಕ ರಾಜ್ಯ ಒಕ್ಕೂಟದಿಂದ ಹುಬ್ಬಳ್ಳಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಹಿಂದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಲಾಯಿತು.
Published on
ಹುಬ್ಬಳ್ಳಿ: ಸಿದ್ದರಾಮಯ್ಯ ಅವರನ್ನು 2028ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಇದರಲ್ಲಿ ಹೈಕಮಾಂಡ್ ಮನಸ್ಸು ಬದಲಾಯಿಸಿದರೆ, ಹೋರಾಟಕ್ಕಿಳಿಯುವುದಾಗಿ ಅಹಿಂದ (ahinda) ಕರ್ನಾಟಕ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಎಚ್ಚರಿಕೆ ನೀಡಿದರು.
ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದಿಂದ ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಬುಧವಾರ ಏರ್ಪಡಿಸಿದ್ದ ಅಹಿಂದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಕುತಂತ್ರ ನಡೆಯುತ್ತಿದೆ. ಅಹಿಂದ ಸಿದ್ದರಾಮಯ್ಯ ಅವರ ಪರಿಕಲ್ಪನೆ. ಅಹಿಂದ ಪ್ರಾಮುಖ್ಯತೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಅಗತ್ಯವಿದೆ ಎಂದರು.
ಗೌರವಾಧ್ಯಕ್ಷ ಸಿದ್ದು ತೇಜಿ ಮಾತನಾಡಿ, ಕಾಂಗ್ರೆಸ್ಸಿಗೆ ಶಕ್ತಿ ತುಂಬುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಡಿ.ಕೆ. ಶಿವಕುಮಾರ ರಾಜ್ಯಾಧ್ಯಕ್ಷರಾದ ನಂತರ ಅಹಿಂದ ನಾಯಕರನ್ನು ಹಂತ ಹಂತವಾಗಿ ಮುಗಿಸುವ ಕೆಲಸ ನಡೆಯುತ್ತಿದೆ. ಇವರಲ್ಲಿ ಕಾಂಗ್ರೆಸ್ ಸಿದ್ಧಾಂತ ಹೋಗಿ, ಬಿಜೆಪಿ ಸಿದ್ಧಾಂತ ಮನೆ ಮಾಡಿದೆ ಎಂದು ದೂರಿದರು.
ಯಾವ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುತ್ತಿದ್ದಾರೆ? ಗ್ಯಾರಂಟಿ ಯೋಜನೆಗಳ ಮೂಲಕ ಜನಮನ ತಲುಪಿದಾಗ ಮುಖ್ಯಮಂತ್ರಿ ಪದವಿ ಬೇರೆಯವರಿಗೆ ಕೊಡುವ ಹುನ್ನಾರ ನಡೆದಿದೆ. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನ ನಡೆದಿದೆ. ಹೀಗೇನಾದರು ಆದರೆ, ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಯುವ ಘಟಕದ ಅಧ್ಯಕ್ಷ ಶಂಕರ ಹೆಗಡೆ ಮಾತನಾಡಿ, ಜಿಲ್ಲೆ, ತಾಲೂಕು, ಗ್ರಾಮ ಘಟಕಗಳನ್ನು ರಚಿಸಿ ಅಹಿಂದ ಶಕ್ತಿಯನ್ನು ಗಟ್ಟಿಗೊಳಿಸಬೇಕು. ನಮ್ಮ ಶಕ್ತಿ ತೋರಿಸಬೇಕಾದರೆ ಎಲ್ಲ ಘಟಕಗಳನ್ನು ಸದೃಢಗೊಳಿಸಬೇಕು ಎಂದರು.
ಪ್ರಮುಖರಾದ ಡಾ. ಶಂಕರ, ಎಂ. ವಾಸಪ್ಪ, ವಿಠ್ಠಲಗೌಡ ಬಿರಾದರ, ರಾಜು ಕೆಂಭಾವಿ, ಹೇಮಂತ ಧಾರವಾಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net