(ahinda) ಅಹಿಂದ ಕಾರ್ಯಕ್ರಮ ರಾಜಕೀಯ ಲಾಭಕ್ಕಲ್ಲ

ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ (ahinda) ರಾಜ್ಯಮಟ್ಟದ ’ಅಹಿಂದ 25-ಹೋರಾಟ, ಸಾಧನೆ, ಸಂಕಲ್ಪ ವಿಚಾರ ಸಂಕಿರಣ’ದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ‘ಅಹಿಂದ ದಾರಿ, ಗುರಿ’ ಪುಸ್ತಕ ಲೋಕಾರ್ಪಣೆ ಮಾಡಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ (ahinda) ರಾಜ್ಯಮಟ್ಟದ ’ಅಹಿಂದ 25-ಹೋರಾಟ, ಸಾಧನೆ, ಸಂಕಲ್ಪ ವಿಚಾರ ಸಂಕಿರಣ’ದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ‘ಅಹಿಂದ ದಾರಿ, ಗುರಿ’ ಪುಸ್ತಕ ಲೋಕಾರ್ಪಣೆ ಮಾಡಿದರು.
Published on
ಹುಬ್ಬಳ್ಳಿ: ರಾಜಕೀಯ ಲಾಭಕ್ಕಾಗಿ ಈ ವಿಚಾರ ಸಂಕಿರಣ ಮಾಡುತ್ತಿಲ್ಲ. ಸಮಾಜದ ಜಾಗೃತಿಗಾಗಿ ಮಾಡಲಾಗುತ್ತಿದೆ. ಮೇ 28ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ(ahinda) ಕಾರ್ಯಾಗಾರ, ವಿಚಾರ ಸಂಕಿರಣ, ಸಭೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ವಿಮಾನ ನಿಲ್ದಾಣ ಬಳಿಯ ರಾಯಲ್ ರಿಟೀಸ್ ಹೋಟೆಲ್ನ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ’ಅಹಿಂದ 25-ಹೋರಾಟ, ಸಾಧನೆ, ಸಂಕಲ್ಪ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ಅಹಿಂದ ಸೇತುವೆಯಾಗಿ ಕೆಲಸ ಮಾಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಕ್ರಿಯಾಶೀಲರಾಗಬೇಕು. ಇಂದಿನಿಂದ ಹೊಸ ಕ್ರಾಂತಿಗೆ ಕಾರಣವಾಗೋಣ. ಒಂದೇ ವಿಚಾರವಿರುವ ನಾಯಕರನ್ನು ವೇದಿಕೆಯಲ್ಲಿ ತರಲು ಯತ್ನಿಸೋಣ ಎಂದರು.
20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಈ ನೆನಪು ಮುಂದಿಟ್ಟುಕೊಂಡು ಏನೆಲ್ಲ ಬದಲಾವಣೆಯಾಗಿದೆ? ಏನೇನು ಆಗಬೇಕು? ಎನ್ನುವುದನ್ನು ಚಿಂತಿಸಬೇಕು. ಇದರಿಂದ ನಾನು ಸಿಎಂ ಆಗಬೇಕು, ಮತ್ತೊಂದಾಗಬೇಕು ಎನ್ನುವ ವಿಚಾರವಿಲ್ಲ. ಅಹಿಂದದೊಳಗಿನ ನ್ಯೂನ್ಯತೆ, ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಅದಕ್ಕಾಗಿ ಸಲಹೆ, ಸೂಚನೆಗಳಿಗಾಗಿ ಕರೆಯಲಾಗಿದೆ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಅಹಿಂದ ವರ್ಗದವರ ಮೇಲೆ ಬಹದೊಡ್ಡ ಜವಾಬ್ದಾರಿ ಇದೆ. ಸಂವಿಧಾನದ ಶಕ್ತಿ ಅಹಿಂದ ವರ್ಗ. ನಾವೆಲ್ಲರೂ ಪ್ರೀತಿ-ವಿಶ್ವಾಸದಿಂದ ಬಾಳಿದಾಗ ಮಾತ್ರ ಅಭಿವೃದ್ಧಿ ಕಾಣಬಹುದು. ಮುಂದಿನ ಪೀಳಿಗೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಮಾತನಾಡಿ, ಅನಕ್ಷರಸ್ಥರು, ನಿರುದ್ಯೋಗಿಗಳು ಹೆಚ್ಚು ಇರುವುದು ಕೆಳವರ್ಗದಲ್ಲಿ ಮಾತ್ರ. ಯಾವ ತಪ್ಪೂ ಮಾಡದೆ ಶಿಕ್ಷೆ ಅನುಭವಿಸುತ್ತಿರುವುದು ಈ ಅಮಾನವೀಯ ಜಾತಿ ವ್ಯವಸ್ಥೆಯಿಂದ. ಸಾಕಷ್ಟು ಮಹಾಪುರುಷರು ಇದರ ವಿರುದ್ಧ ಧ್ವನಿ ಎತ್ತಿದರೂ ಕಾನೂನು ಬೇಕು ಎಂದು ನಿರ್ಧರಿಸಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ಬಣ್ಣಿಸಿದರು.
ಅಹಿಂದ ನಾಯಕರಾದ ದಾನಪ್ಪ ಕಬ್ಬೇರ, ಕೆ.ಎಂ. ರಾಮಚಂದ್ರ, ಅಸ್ಸಾಂನ ಪ್ರೊ. ಪ್ರದೀಪ ರಾಮಾವತ್, ಡಾ. ರಾಜಾ ನಾಯಕ್, ಚಂದ್ರಶೇಖರ, ಪಾಂಡುರಂಗ ಪಮ್ಮಾರ ಇತರರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ಅಹಿಂದ ದಾರಿ, ಗುರಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಪ್ರಮುಖರಾದ ರಾಹುಲ್ ಜಾರಕಿಹೊಳಿ, ವಿನೋದ ಅಸೂಟಿ, ಅಂಬಣ್ಣ ಅರೋಲಿ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಚಂದ್ರಶೇಖರ ಜುಟ್ಟಲ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net