ಕರ್ನಾಟಕದ 17 ಸೆಂಟರ್ಗಳಲ್ಲಿ 24354 ಜನ ಪರೀಕ್ಷೆ ಬರೆದಿದ್ದಾರೆ. ಫಲಿತಾಂಶ ಪಟ್ಟಿಯನ್ನು ಪರಿಶೀಲಿಸಿದರೆ ಬೆಂಗಳೂರಲ್ಲಿ 200 ಅಂಕ ಪಡೆದವರು ಕೇವಲ ಒಬ್ಬರು, 196 ಅಂಕದವರು ಕೇವಲ 10 ಜನರು, ಧಾರವಾಡದಲ್ಲಿ 200 ಅಂಕ ಪಡೆದವರು ಕೇವಲ ಇಬ್ಬರು, ವಿಜಯಪುರದಲ್ಲಿ ಒಬ್ಬರೂ ಇಲ್ಲ, ಕಲಬುಗಿರ್ಯಲ್ಲಿ 3 ಜನ ಹೀಗೆ 16 ಕೇಂದ್ರಗಳಲ್ಲಿ 200 ಅಂಕ ಪಡೆದವರು ಬೆರಳೆಣಿಕೆ, ಇನ್ನೂ ಕೆಲವೆಡೆ ಝೀರೋ ಇದ್ದಾರೆ.