agasanakatte prize ಹುಟ್ಟಿಬಂದಿ ಎಲ್ಲಮ್ಮನಾಗಿ ಕಥೆಗೆ ಪ್ರಶಸ್ತಿ

agasanakatte prize ನಭಾಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ.
agasanakatte prize ನಭಾಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ನಭಾಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ
  • ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ
ಹುಬ್ಬಳ್ಳಿ: agasanakatte prize ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ 2026ನೇ ಸಾಲಿನ ಪ್ರಶಸ್ತಿಯು ನಭಾ ಅವರ "ಹುಟ್ಟಿಬಂದಿ ಎಲ್ಲಮ್ಮನಾಗಿ' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ.
ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಥೆಗಾರರಾದ ಚನ್ನಪ್ಪ ಅಂಗಡಿ ಮತ್ತು ಗಾಯತ್ರಿ ರವಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.
ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆ ಹಾಗೂ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಒಂಬತ್ತನೇ ವರ್ಷದ ಸ್ಪರ್ಧೆ ಇದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ತಿಂಗಳಲ್ಲಿ ಏರ್ಪಡಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಥೆಗಾರ್ತಿಯ ಪರಿಚಯ

ನಭಾ, ಮೂಲತಃ ಧಾರವಾಡದವರಾಗಿದ್ದು, ಸದ್ಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಿಂಟ್​ ಮೇಕಿಂಗ್​ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಚಿತ್ರಕಲೆ ಇವರ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾಗಿದ್ದರೂ ಸಾಹಿತ್ಯದಲ್ಲೂ ಬಾಲ್ಯದಿಂದ ಆಸಕ್ತಿ ಹೊಂದಿದ್ದಾರೆ. ಕವಿತೆ ಕತೆ ಬರೆಯುತ್ತಿದ್ದಾರೆ. ಇವರ "ಚಿಟ್ಟೆ' ಕವನ ಸಂಕಲನಕ್ಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ ದೊರೆತಿದೆ.
ಇತ್ತೀಚೆಗೆ ಇವರು ಸೃಜನಶೀಲ ವಿಭಾಗದಲ್ಲಿ "ಟೋಟೊ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಇದೀಗ ಇವರ "ಹುಟ್ಟಿಬಂದಿ ಎಲ್ಲಮ್ಮನಾಗಿ' ಕಥೆಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ- 2026ರ ಬಹುಮಾನ ಲಭಿಸಿರುವುದು ವಿಶೇಷತೆ ತಂದಿದೆ ಎಂದು ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ ಸಮಿತಿ, ಅಕ್ಷರ ಸಾಹಿತ್ಯ ವೇದಿಕೆಯ ಸುನಂದಾ ಕಡಮೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net