ಕಟ್ಟುನಿಟ್ಟಾಗಿ ಸಂಶೋಧನಾ ವಿಧಾನ ಅಳವಡಿಸಿಕೊಳ್ಳಿ

ಪ್ರೊ.ಎ.ಎಂ.‌ಖಾನ್
ಪ್ರೊ.ಎ.ಎಂ.‌ಖಾನ್
Published on
ಧಾರವಾಡ: ಸಂಶೋಧನಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಲ್ಲಿ ಮಾತ್ರ ಸಂಶೋಧನಾ ಗುಣಮಟ್ಟ ಕಾಪಾಡಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಎಂ.ಎಂ.ಟಿ.ಸಿ. ಕೇಂದ್ರದಲ್ಲಿ ಕವಿವಿ ವ್ಯಾಪ್ತಿಯ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ `3 ದಿನಗಳ ಸಂಶೋಧನಾ ತರಬೇತಿ' ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಸಂಶೋಧನೆಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಸಂಶೋಧನಾ ಮೌಲ್ಯಗಳನ್ನು ಸಂಶೋಧಕರು ಅಳವಡಿಸಿಕೊಳ್ಳಬೇಕು ಎಂದರು.
ಕವಿವಿ ಕುಲಸಚಿವ ಪ್ರೊ. ಮೃತ್ಯುಂಜಯ ಅಗಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಸ್ತುತ ಹಾಗೂ ಸಮಾಜಮುಖಿ ಸಂಶೋಧನೆಗಳ ಅಗತ್ಯವಿದೆ ಎಂದರು.
ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಡಾ. ಬಾಬು ಜಗಜೀವನರಾಮ ಸಂಶೋಧನಾ ಸಂಸ್ಥೆಯ ಆರ್ಥಿಕ ಅನುದಾನದೊಂದಿಗೆ ಮೂರು ದಿನ ನಡೆಯುವ ಕಾರ್ಯಾಗಾರ ವಿಶೇಷ ಪರಿಣಿತರು ಸಂಶೋಧನೆಗೆ ಸಂಬಂಧಿಸಿದ ಸಂಶೋಧನಾ ವಿಧಾನ, ಬರವಣಿಗೆ, ಸಂಶೋಧನಾ ಮೌಲ್ಯಗಳು ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕವಿವಿ ಹಣಕಾಸು ಅಽಕಾರಿಗಳಾದ ಪ್ರದೀಪಕುಮಾರ, ಎಂ.ಎಂ.ಟಿ.ಸಿ. ಕೇಂದ್ರದ ನಿರ್ದೇಶಕ ಡಾ.ಬಿ.ಎಚ್ ನಾಗೂರ, ಪ್ರೊ. ಶಿವಶರಣ ಸಿ.ಟಿ., ಡಾ. ಜಯಶ್ರೀ ದೇಶಮಾನೆ, ಡಾ. ಮಹಾದೇವ ಬಿಡ್ನಾಳ, ರಾಜಶೇಖರ ವಿಭೂತಿ ಮತ್ತು ಶಿಕ್ಷಕೇತರ ಸಿಬ್ಬಂದಿಯಾದ ನಂದೀಶ ಕೋಟೂರ, ಕನಕೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net