ಹುಬ್ಬಳ್ಳಿ: ಧಾರವಾಡ ಮಾಳಮಡ್ಡಿಯ ಕೆಇ ಬೋರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆಧ್ಯಾ ರಾಮ್ ಕೌಲಗುಡ್, adhya kaulagud ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಡ್ ಸಂಸ್ಥೆ ಇತ್ತೀಚೆಗೆ ಸಂಘಟಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ಒಲಿಂಪಿಯಡ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ಶಿಷ್ಯ ವೇತನ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಆಧ್ಯಾ ಭರತ ನಾಟ್ಯ ಪ್ರವೀಣೆಯೂ ಆಗಿದ್ದು, ವಯಾಲಿನ್, ರೋಲರ್ ಸ್ಕೇಟಿಂಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.