Adarsh college ಸಾಮಾನ್ಯ ಮಕ್ಕಳಿಗೂ ಉತ್ತಮ ಶಿಕ್ಷಣ

Adarsh college ಹುಬ್ಬಳ್ಳಿಯ ಆದರ್ಶ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಲ್ಲಿಕಾರ್ಜುನ ಸಾವಕಾರ, ಡಾ. ಲಿಂಗರಾಜ ಮುಳ್ಳಳ್ಳಿ, ಪ್ರೊ. ಸುರೇಶ ಕುನ್ನೂರ, ಪ್ರೊ. ಬಿ.ಸಿ. ಗೌಡರ, ಇತರರು ಇದ್ದರು.
Adarsh college ಹುಬ್ಬಳ್ಳಿಯ ಆದರ್ಶ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಲ್ಲಿಕಾರ್ಜುನ ಸಾವಕಾರ, ಡಾ. ಲಿಂಗರಾಜ ಮುಳ್ಳಳ್ಳಿ, ಪ್ರೊ. ಸುರೇಶ ಕುನ್ನೂರ, ಪ್ರೊ. ಬಿ.ಸಿ. ಗೌಡರ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭೆ ಪ್ರೋತ್ಸಾಹಿಸುವ ಆದರ್ಶ ಕಾಲೇಜು
  • ಆಡಳಿತ ಮಂಡಳಿಯ ಮಲ್ಲಿಕಾರ್ಜುನ ಸಾವಕಾರ ಹೇಳಿಕೆ
ಹುಬ್ಬಳ್ಳಿ: Adarsh college ಲಿಂಗರಾಜನಗರದ ಶ್ರೀಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಆದರ್ಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಾಲಕರಿಗೆ ಪುನಶ್ಚೇತನ ಕಾರ್ಯಕ್ರಮ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶ್ರೀಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಶ್ರೀಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ, ಆದರ್ಶ ಮಹಾವಿದ್ಯಾಲಯವು ಪ್ರತಿವರ್ಷ ಸಾಮಾನ್ಯ ಮಕ್ಕಳನ್ನು ಕೂಡಾ ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಗುರಿ ಇಟ್ಟುಕೊಂಡು ಮುನ್ನಡೆದಿದೆ. ಅದರಲ್ಲಿ ಯಶಸ್ವಿ ಕೂಡ ಆಗುತ್ತಿದೆ ಎಂದರು.
ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಲಿಂಗರಾಜ ಸಿ. ಮುಳ್ಳಳ್ಳಿ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಈಗಿನಿಂದಲೇ ಅಧ್ಯಯನದಲ್ಲಿ ತೊಡಗಿ ಉತ್ತಮ ಅಂಕ ಗಳಿಸಬೇಕು. ಜತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜ್ಞಾನ ಗಳಿಸಿ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರಾದ ಪ್ರೊ. ಸುರೇಶ ಕುನ್ನೂರ ಮತ್ತು ಪ್ರೊ. ಬಿ.ಸಿ. ಗೌಡರ, ಪ್ರೊ. ಡೇನಿಯಲ್​ ಹೊಸಕೇರಿ ಅವರು, ಮಹಾವಿದ್ಯಾಲಯ ನಡೆದು ಬಂದ ದಾರಿ ಮತ್ತು ಸಾಧನೆಗೆ ಪೂರ್ವ ತಯಾರಿ ಹೇಗಿರಬೇಕೆಂಬುದನ್ನು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net