ಪರಿಶ್ರಮ, ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ

ಜಿಮ್ಖಾನಾ ಕಾರ್ಯ ಚಟುವಟಿಕೆಗಳ ಸಮಾರೋಪ, ಬಹುಮಾನ ವಿತರಣೆ
ಜಿಮ್ಖಾನಾ ಕಾರ್ಯ ಚಟುವಟಿಕೆಗಳ ಸಮಾರೋಪ, ಬಹುಮಾನ ವಿತರಣೆ
Published on
ಧಾರವಾಡ: ಜೀವನದಲ್ಲಿ ಕಠಿಣ ಪರಿಶ್ರಮ ನಿರಂತರ ಪ್ರಯತ್ನ, ತಾಳ್ಮೆ ಹಾಗೂ ಅರ್ಪಣಾ ಮನೋಭಾವದಿಂದ ಏನನ್ನಾದರೂ ಸಾಽಸಲು ಸಾಧ್ಯ ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ, ಸ್ನಾತಕೋತ್ತರ ಜಿಮ್ಖಾನಾ ಸಹಯೋಗದಲ್ಲಿ 2025-26ನೇ ಸಾಲಿನ ಸ್ನಾತಕೋತ್ತರ ಜಿಮ್ಖಾನಾ ಕಾರ್ಯ ಚಟುವಟಿಕೆಗಳ ಸಮÁರೋಪ ಸಮÁರಂಭದಲ್ಲಿ ಪಠ್ಯೇತರ ಚಟುವಟಿಕೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಶುಕ್ರವಾರ ಪ್ರಶಸ್ತಿ ನೀಡಿ ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಬಹಳ ಅವಶ್ಯ. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದಲ್ಲಿ ಮÁದರಿ ವ್ಯಕ್ತಿ ಆಗಬೇಕು. ಜ್ಞಾನ ನಿರಂತರವಾಗಿ ಪಡೆಯಲು ಉತ್ಸಾಹಿತರಾಗಿರಬೇಕು. ದೇಶದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಾದರಿ ವಿಶ್ವವಿದ್ಯಾಲಯ ಆಗಿದ್ದು ಇಂತಹ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮÁಡಿದ ವಿದ್ಯಾರ್ಥಿಗಳು ಧನ್ಯರು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ. ಎಂ.ಎಚ್. ಅಗಡಿ ಮÁತನಾಡಿ, ಜೀವನದಲ್ಲಿ ಅನೇಕ ಸವಾಲುಗಳು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹೇಶ ಹುಲ್ಲನ್ನವರ ಮÁತನಾಡಿದರು.
ಸ್ನಾತಕೋತ್ತರ ಜಿಮ್ಖಾನಾ ಆಯೋಜಿಸಿದ್ದ ಅಂತರ ವಿಭಾಗಗಳ ಕ್ರೀಡಾಕೂಟದಲ್ಲಿ ವ್ಯಕ್ತಿಗತ ಮತ್ತು ಗುಂಪು ಕ್ರೀಡೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪದಕಗಳನ್ನು ವಿತರಿಸಲಾಯಿತು. ಕಬಡ್ಡಿಯಲ್ಲಿ ಸಮಾಜಶಾಸ್ತç ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಕ್ರಿಕೆಟ್‌ನಲ್ಲಿ ಗಣಿತಶಾಸ್ತç ಅಧ್ಯಯನ ವಿಭಾಗ, ಥ್ರೊ ಬಾಲ್‌ನಲ್ಲಿ ಗಣಿತಶಾಸ್ತç ಅಧ್ಯಯನ ವಿಭಾಗ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.
ವಿಶೇಷ ಪ್ರಶಸ್ತಿಗಳಾದ ಪ್ರೊಸೇಸನ್ ಪ್ರಶಸ್ತಿ ವಾಣಿಜ್ಯ ವಿಭಾಗ, -ೆÃರ್ ಪ್ಲೇ ಅವಾರ್ಡ್ ಕನ್ನಡ ವಿಭಾಗವು ಪಡೆಯಿತು. ಗಣಿತಶಾಸ್ತç ವಿಭಾಗದ ವಿದ್ಯಾರ್ಥಿಗಳು ಜನರಲ್ ಚಾಂಪಿಯನ್‌ಷಿಪ್ ಪಡೆದರು. ಅರ್ಥಶಾಸ್ತç ವಿಭಾಗದ ವಿದ್ಯಾರ್ಥಿಗಳು ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಸ್ನಾತಕೋತ್ತರ ವಿದ್ಯಾರ್ಥಿ ಕಾರ್ಯದರ್ಶಿ ಮಹಮ್ಮದ ವಾಲೀಕಾರ ವಾರ್ಷಿಕ ವರದಿ ಮಂಡಿಸಿದರು. ಸ್ನಾತಕೋತ್ತರ ಜಿಮ್ಖಾನಾ ಅಧ್ಯಕ್ಷ ಪ್ರೊ. ಮನೋಜ ಡೊಳ್ಳಿ, ಡಾ. ಪ್ರಶಾಂತ ಎಚ್.ವೈ., ಡಾ. ಕಿರಣಕುಮಾರ ಬನ್ನಿಗೋಳ, ಡಾ. ಎಸ್.ಸಿ. ಶಿರಾಳಶೆಟ್ಟಿ, ಡಾ. ಪಿ.ಜಿ.ಪಾಟೀಲ, ಡಾ. ಅಶೋಕ ಹುಲಿಬಂಡಿ, ಡಾ. ಲೋಕೇಶ್, ಜೆ.ಎಂ. ಚಂದುನವರ, ವಿದ್ಯಾರ್ಥಿ ಕಾರ್ಯದರ್ಶಿ ಮಹಮ್ಮದ ವಾಲೀಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net