ಧಾರವಾಡ: ಇಲ್ಲಿನ ಕಲ್ಯಾಣನಗರದಲ್ಲಿರುವ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪಿಠದ ಅಂಗಸಂಸ್ಥೆಯಾದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಶ್ರವಣ ವಿಜಯಾನಂದ ಭಟ್ ರಾಷ್ಟ್ರೀಯ ಪರೀಾ ಸಂಸ್ಥೆ ನಡೆಸುವ 2026ರ ಜೆಇಇ ಮೇನ್ಸ್ನಲ್ಲಿ 99.05 ಪರ್ಸೆಂಟೈಲ್ ಅಂಕ ಪಡೆದಿದ್ದಾನೆ. ಸಾಧಕ ವಿದ್ಯಾಥಿರ್ಯನ್ನು ಸಂಸ್ಥೆಯ ಕಾರ್ಯದಶಿರ್ ಪ್ರೊ. ಶಿವಾನಂದ ಪಟ್ಟಣಶೆಟ್ಟಿ, ಪ್ರಾಚಾರ್ಯ ಶಶಿಧರ ತೋಡಕರ, ಆಡಳಿತ ಮಂಡಳಿ ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.