ಗ್ರೂಪ್​ ಸ್ಕಿಪಿಂಗ್​ನಲ್ಲಿ ಸಾಧನೆ

ಸ್ಕಿಪಿಂಗ್​ನಲ್ಲಿ ಸಾಧನೆ
ಸ್ಕಿಪಿಂಗ್​ನಲ್ಲಿ ಸಾಧನೆ
Published on
ಧಾರವಾಡ: ಸ್ಕೂಲ್​ ಗೇಮ್ಸ್​ ಫೆಡರೇಶನ್​ ಆಫ್​ ಇಂಡಿಯಾ ಬೆಂಗಳೂರಿನ ದಕ್ಷಿಣ ವಲಯ ಸಾರಕ್ಕಿ ಕೆಪಿಎಸ್​ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಗ್ರೂಪ್​ ಸ್ಕಿಪಿಂಗ್​ನಲ್ಲಿ ನಗರದ ತಡಸಿನಕೊಪ್ಪದ ಎಕ್ಸಲೆಂಟ್​ ಸಮೂಹ ಸಂಸ್ಥೆಯ ದಿ ಗ್ಲೋಬಲ್​ ಸ್ಕೂಲ್​ ಆಫ್​ ಎಕ್ಸಲೆನ್ಸ್​ ಶಾಲೆಯ ವಿದ್ಯಾಥಿರ್ಗಳು ಉತ್ತಮ ಸಾಧನೆ ಮಾಡಿದ್ದಾರೆ.
14 ವಯೋಮಿತಿಯ ಬಾಲಕಿಯರ ಗ್ರೂಪ್​ ಸ್ಕಿಪಿಂಗ್​ನಲ್ಲಿ ವಿದ್ಯಾಥಿರ್ಗಳಾದ ಮುಕ್ತಿ ಪಟೇಲ, ನಿಯತಿ ಪಟೇಲ್​, ವರ್ಷ ದಾನಗೌಡರ್​, ಲಕ್ಷಿ$್ಮ ಕಣವಿ ಪ್ರಥಮ ಸ್ಥಾನ ಗಳಿಸಿದ್ದಾರೆ.
17 ವಯೋಮಿತಿಯಲ್ಲಿ ಪ್ರಜ್ಞಾ ನಾಯಕ್​, ದಿಶಾ ಪಾಟೀಲ, ಶ್ರವ್ಯ ಶೆಟ್ಟಿ, ಮಹಾಕ ಹಾದಿಮನಿ ಪ್ರಥಮ ಸ್ಥಾನ ಗಳಿಸಿದ್ದಾರೆ. 17 ವಯೋಮಿತಿಯ ಬಾಲಕರ ಸ್ಪರ್ಧೆಯಲ್ಲಿ ವೇದ, ವೇದ ಪಿ.ಆರ್​., ಹಿತೇನ್​ ಪಟೇಲ್​, ಕೃತಿನ್​ ಇ.ಎಸ್​., ರಖೀಬ ಶೇಕ್​ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾಧಿಕ ವಿದ್ಯಾಥಿರ್ಗಳನ್ನು ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಆಡಳಿತ ಅಧಿಕಾರಿ ಶಿವಾನಂದ ಬಿರಾದಾರ, ಮುಖ್ಯಾಧ್ಯಾಪಕ ಉಜ್ವಲ ರಾಯಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮೈತ್ರಾ ಬನ್ನಿಕೊಪ್ಪ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net