

ಪ್ರಮುಖ ಮುಖ್ಯಾಂಶಗಳು
ಜೀವನದಲ್ಲಿ ನಮಗೆ ನಾವೇ ಮಾದರಿಯಾಗಬೇಕು. ಅಸಾಧ್ಯ ಎಂಬ ಪದ ನಮ್ಮ ಶಬ್ಧಕೋಶದಲ್ಲಿ ಇರಬಾರದು. ಎಲ್ಲವೂ ಸಾಧ್ಯ ಎಂಬ ಮನೋಭಾವವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಜಿ.ಬಿ. ಗೌಡಪ್ಪಗೋಳ ಮಾತನಾಡಿ, ಮನುಷ್ಯನಿಗೆ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಆರೋಗ್ಯ ಮುಖ್ಯ ಎಂದರು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಮತ್ತು ಮನೋನಿಯಂತ್ರಣ ಪಡೆಯಬಹುದು ಎಂದು ಹೇಳಿದರು.
ಕಾಲೇಜು ಒಕ್ಕೂಟದ ಕಾರ್ಯದರ್ಶಿ ರವಿ ದೊಡ್ಡಬಿದರಿ, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಪ್ರಾಚಾರ್ಯ ಎಸ್. ಬಿ. ಸಣಗೌಡ್ರ, ಸಚಿನ ಮಚಾ , ಶಂಕರ ಕುಂಬಾರ, ಪ್ರಭು ರಕರಡ್ಡಿ, ಅಕ್ಷಯ ಯಾದವ, ವೇಧಾ ಹುಡೇದ, ಚೇತನಾ ಮೂಕಿ, ಎಸ್.ಆರ್. ಪಾಟೀಲ ಹಾಗೂ ಇತರರಿದ್ದರು.
ಉಪನ್ಯಾಸಕಿ ಪ್ರಿಯಾಂಕಾ ನವಲಗುಂದ ಸ್ವಾಗತಿಸಿದರು. ಪ್ರಿಯಾಂಕಾ ಕಿರೇಸೂರ ಪರಿಚಯಿಸಿದರು. ಪವನ ಧಮಾಮ್ ವಂದಿಸಿದರು.