ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡಿ, 12ನೇ ಶತಮಾನದಲ್ಲಿ ಸ್ತಿಯರಿಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿದ್ದು ಬಸವಣ್ಣನವರು. ಇದೊಂದು ಜಾಗತಿಕ ದಾಖಲೆ. ನಡೆ-ನುಡಿ-ಸಿದ್ಧಾಂತ ಒಂದಾಗಿ ಬಾಳದಿದ್ದರೆ ಸಾಮಾಜಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಹೋಗುತ್ತವೆ. ದಿ.ಗದಿಗೆಯ್ಯ ಹೊನ್ನಾಪೂರಮಠರು ಕನ್ನಡದ ಆತ್ಮಶಕ್ತಿಯಂತೆ ಬದುಕಿದವರು. ಎಂದಿಗೂ ಸಂಪತ್ತು ಸಂಗ್ರಹದ ಬೆನ್ನು ಹತ್ತದೆ, ನಡೆ-ನುಡಿ ಒಂದಾಗಿ ಸೌಜನ್ಯದ ಬದುಕು ಸಾಗಿಸಿದವರಾಗಿದ್ದರು ಎಂದರು.