ಅಯೋಗ್ಯ 2 ಚಿತ್ರದ ಹಾಡು ಬಿಡುಗಡೆ song

song ಅಯೋಗ್ಯ-2 ಕನ್ನಡ ಚಲನಚಿತ್ರದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ನಾಯಕ ನಟ ನೀನಾಸಂ ಸತೀಶ.
song ಅಯೋಗ್ಯ-2 ಕನ್ನಡ ಚಲನಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ನೀನಾಸಂ ಸತೀಶ.
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರ ಯಶಸ್ಸು ಕಂಡರೆ 3ನೇ ಭಾಗ ನಿರ್ವಿುಸುವ ಬಗ್ಗೆ ಯೋಚಿಸಲಾಗುವುದು.
  • ಅಯೋಗ್ಯ 2 ಚಿತ್ರ ಆಗಸ್ಟ್ 7ರಂದು ದೇಶದಾದ್ಯಂತ ಬಿಡುಗಡೆಗೊಳ್ಳಲಿದೆ.
  • ಅಯೋಗ್ಯ 2ಕ್ಕು ಸಹ ಜನರ ಬೆಂಬಲದ ನಿರೀಕ್ಷೆ ಇದೆ.
ಹುಬ್ಬಳ್ಳಿ :
song ಅಯೋಗ್ಯ-2 ಕನ್ನಡ ಚಲನಚಿತ್ರದ ‘ಹುಡ್ಗೀರ್ ಡೇಂಜರಸ್...’ ಎಂಬ ಮೂರನೇ ಹಾಡು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜು. 19ರಂದು ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಾಯಕ ನಟ ನೀನಾಸಂ ಸತೀಶ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಯೋಗ್ಯ 2 ಸಿನೆಮಾದ ಅಣ್ಣಾ ಬಂದ್ರೆ ಜೋಶ್ ಬರ್ತದೆ... ಹಾಗೂ ಮುದ್ದು ಪುಟ್ಟಲಕ್ಷ್ಮೀ.. ಎಂಬ ಎರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡಿವೆ. 4ನೇ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಲಾಗುವುದು. 5ನೇ ಹಾಡನ್ನು ಬೆಂಗಳೂರಿನಲ್ಲಿ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.
ಅಯೋಗ್ಯ ಚಿತ್ರದ ಯಶಸ್ಸಿನ ನಂತರ ಭಾಗ 2 ಮಾಡುವ ವಿಚಾರ ಇತ್ತು. ಆದರೆ, ನಿರ್ದೇಶಕರು, ತಾವು ಸೇರಿದಂತೆ ಇನ್ನಿತರ ಕಲಾವಿದರು ಬೇರೆ ಯೋಜನೆಗಳಲ್ಲಿ ತೊಡಗಿದ್ದರಿಂದ ಅಯೋಗ್ಯ 2 ಚಿತ್ರಕ್ಕೆ ಸಮಯ ಬೇಕಾಯಿತು ಎಂದರು.
ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಅಯೋಗ್ಯ ಚಿತ್ರಕ್ಕೆ ಉತ್ತರ ಕರ್ನಾಟಕದಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಅಯೋಗ್ಯ 2ಕ್ಕು ಸಹ ಜನರ ಬೆಂಬಲದ ನಿರೀಕ್ಷೆ ಇದೆ. ಈ ಚಿತ್ರವೂ ಯಶಸ್ಸು ಕಂಡರೆ 3ನೇ ಭಾಗ ನಿರ್ವಿುಸುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
ನಿರ್ದೇಶಕ ಎಸ್. ಮಹೇಶ ಕುಮಾರ ಮಾತನಾಡಿ, ಚಿತ್ರದ ಕಥೆಯಲ್ಲಿ ನೈಜತೆ ಇದೆ. ಚಿತ್ರದ ಪಾತ್ರದಾರಿ ಸಿದ್ದೇಗೌಡ ಹಾಗೂ ನಂದಿನಿ ಈಗಲೂ ಪ್ರೀತಿಸುತ್ತಿದ್ದು, ಮದುವೆಯಾಗಿಲ್ಲ. ನಮ್ಮ ಮನೆಯ ಹಿಂದೆಯೇ ಈ ಜೋಡಿ ಇದೆ. ಅವರ ಪ್ರೀತಿಯನ್ನು ಆಧರಿಸಿ, ಅಯೋಗ್ಯ ಚಿತ್ರ ನಿರ್ವಿುಸಲಾಯಿತು ಎಂದರು.
ಈ ಮೊದಲಿನ ಯೋಜನೆಯಂತೆ ಅಯೋಗ್ಯ 2 ಚಿತ್ರ ಆಗಸ್ಟ್ 14ರಂದು ಬಿಡುಗಡೆಗೊಳ್ಳಬೇಕಿತ್ತು. ಆದರೆ, ಟಾಕ್ಸಿಕ್ ಸಿನಿಮಾ ತೆರೆ ಕಾಣಲಿರುವುದರಿಂದ ನಮ್ಮ ಸಿನಿಮಾವನ್ನು ನಿಗದಿತ ಅವಧಿಗಿಂತ ಮುಂಚೆ ಬಿಡುಗಡೆಗೊಳಿಸುತ್ತಿರುವುದಾಗಿ ತಿಳಿಸಿದರು.
ನಿರ್ಮಾಪಕ ಮುನೇಗೌಡ ಮಾತನಾಡಿ, ಅಯೋಗ್ಯ 2 ಚಿತ್ರ ಆಗಸ್ಟ್ 7ರಂದು ದೇಶದಾದ್ಯಂತ ಬಿಡುಗಡೆಗೊಳ್ಳಲಿದೆ. ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ನಿರ್ವಿುಸಲಾಗಿದೆ ಎಂದು ತಿಳಿಸಿದರು.
ನಟರಾದ ಶಿವರಾಜ್, ಗಿರೀಶ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net