Aaryans ಶಿಸ್ತು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ

ಹುಬ್ಬಳ್ಳಿಯ Aaryans ಆರ್ಯನ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಮುರುಗೇಶ ಚನ್ನಣ್ಣವರ, ರಾಕೇಶ ಭದ್ರಾಪೂರ, ರಮೇಶ ಬಾಫಣಾ ಉದ್ಘಾಟಿಸಿದರು. ಗೌತಮ್ ಬಾಫಣಾ, ವಿಕ್ರಮ್ ಜೈನ್, ಕಾರ್ಯದರ್ಶಿ ಸಂದೀಪ ಜೈನ್, ಖಜಾಂಚಿ ಪ್ರವೀಣ ಜೈನ್ ಇದ್ದರು.

Published on
ಹುಬ್ಬಳ್ಳಿ: ಇಲ್ಲಿಯ ಕೆಜೆಇಟಿ ಸಂಸ್ಥೆಯ ಆರ್ಯನ್ಸ್ Aaryans ಪಬ್ಲಿಕ್ ಸ್ಕೂಲ್‌ನಲ್ಲಿ ಇತ್ತೀಚೆಗೆ ‘ಉತ್ಕರ್ಷ ಆಟವಾಡೋ ಆರ್ಯನ್ಸ್ ಆಟವಾಡೋ 2025’ -ವಾರ್ಷಿಕ ಕ್ರೀಡಾ ಕೂಟ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ, ಆದಾಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ ರಾಕೇಶ ಭದ್ರಾಪೂರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಶಿಸ್ತು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದರು.
ಪಾಲಕರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.  
ಕ್ರೀಡಾಕೂಟದಲ್ಲಿ ಜಲ ಹೌಸ್ ಚಾಂಪಿಯನ್, ಪೃಥ್ವಿ ಹೌಸ್ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಆಡಳಿತ ಮಂಡಳಿ ಅಧ್ಯಕ್ಷ ರಮೇಶ ಬಾಫಣಾ, ಉಪಾಧ್ಯಕ್ಷ ವಿಕ್ರಮ್ ಜೈನ್, ಕಾರ್ಯದರ್ಶಿ ಸಂದೀಪ ಜೈನ್, ಖಜಾಂಚಿ ಪ್ರವೀಣ ಜೈನ್, ನಿರ್ದೇಶಕರಾದ ಗೌತಮ ಬಾಫಣಾ, ನಿರ್ಮಲ್ ಮೆಹ್ತಾ, ಪ್ರಾಚಾರ್ಯೆ ಡಾ. ಶಿರೀಷ್ ಎಲಿಜಬತ್, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net