aarudha ಆರೂಢ ಆರತಿ ಉದ್ಘಾಟನೆ ಡಿ. 19ರಂದು

aarudha ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ.
aarudha ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ.
Published on

ಪ್ರಮುಖ ಮುಖ್ಯಾಂಶಗಳು

  • ಪುಷ್ಕರಣೆ ಪಕ್ಕ ಪ್ರತ್ಯೇಕ ಕಟ್ಟೆ ನಿರ್ವಿುಸಲಾಗಿದೆ
  • ಗಂಗಾ ಆರತಿ ಮಾದರಿಯಲ್ಲಿ ಆರೂಢ ಆರತಿ.
  • ಒಟ್ಟು 35 ನಿಮಿಷಗಳವರೆಗೆ ನಡೆಯಲಿರುವ ಆರತಿ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಉದ್ಘಾಟಿಸುವರು ಎಂದರು.
ಶಾಂತಾಶ್ರಮದ ಶ್ರೀ ಅಭಿನವರ ಸಿದ್ಧಾರೂಢ ಸ್ವಾಮೀಜಿ, ಪಂಢರಪುರದ ಶ್ರೀ ಪ್ರಭಾಕರ ಬುವಾ ಬೋಧಲೆ ಮಹಾರಾಜರು ಹಾಗೂ ಶ್ರೀ ಯಶವಂತ ಬುವಾ ಬೋಧಲೆ ಮಹಾರಾಜರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ಗಂಗಾ ಆರತಿ ಮಾದರಿಯಲ್ಲಿ ಆರೂಢ ಆರತಿ ನಡೆಯಲಿದ್ದು, ಇದಕ್ಕಾಗಿ ಶ್ರೀಮಠದ ಆವರಣದಲ್ಲಿನ ಪುಷ್ಕರಣೆ ಪಕ್ಕ ಪ್ರತ್ಯೇಕ ಕಟ್ಟೆ ನಿರ್ವಿುಸಲಾಗಿದೆ ಎಂದರು.
ಆರೂಢ ಆರತಿ ಬೆಳಗುವುದಕ್ಕಾಗಿ 15 ಜನರಿಗೆ ತರಬೇತಿ ನೀಡಲಾಗಿದೆ. ಸರದಿಯಂತೆ 5 ಜನರ ತಂಡ ಆರೂಢ ಆರತಿ ಬೆಳಗಲಿದೆ. ಪ್ರತಿ ಅಮವಾಸ್ಯೆ ದಿನ ಆರೂಢ ಆರತಿ ಮಾಡುವ ಯೋಜನೆ ಇದೆ ಎಂದು ಹೇಳಿದರು.
ಒಟ್ಟು 35 ನಿಮಿಷಗಳವರೆಗೆ ನಡೆಯಲಿರುವ ಆರತಿಯಲ್ಲಿ ಗಣೇಶ ಸ್ತೋತ್ರ, ಶ್ರೀ ಸಿದ್ಧಾರೂಢರ ಮಂತ್ರ ಹಾಗೂ ಇನ್ನಿತರ ಧಾರ್ವಿುಕ ಆಚರಣೆ ನಡೆಯಲಿವೆ ಎಂದರು.
ಶಿವರಾಜ ಸುಲಾಕೆ, ಗೀತಾ ಕಲಬುರ್ಗಿ, ಬಸವರಾಜ ಕಲ್ಯಾಣಶೆಟ್ಟರ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net