ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬಾತನೇ ವಿದ್ಯುತ್ ಕಂಬ ಏರಿದ ಯುವಕ ಎಂದು ತಿಳಿದು ಬಂದಿದೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಯುವಕ ಶನಿವಾರ ಸಂಜೆ 4 ಗಂಟೆಗೆ ಮದ್ಯಪಾನ ಸೇವಿಸಿ, 150 ಅಡಿ ಎತ್ತರದ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಬಂದು ಕೆಳಗೆ ಇಳಿಯುವಂತೆ ಮನವೊಲಿಸುವಲ್ಲಿ ಮುಂದಾಗಿದ್ದಾರೆ. ಆಗ ಯುವಕ ಯಾರಾದರೂ ನನಗೆ ಕರೆದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ರಾತ್ರಿ 9ಗಂಟೆಗೆ ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ, ಯುವಕನ ಮನವೊಲಿಸಿ ವಿದ್ಯುತ್ ಕಂಬದಿಂದ ಕೆಳೆಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.