ಶಿಷ್ಯನಿಗೆ ಬಾನ್ಸುರಿ ಕಲಿಸಲು ಹರಸಾಹಸ ಪಟ್ಟ ಗುರು flute

flute ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಂಡ ಕೊಳಲು ಡಾಟ್ ಕಾಮ್ (ಇಡಿ) ನಾಟಕದ ದೃಶ್ಯದಲ್ಲಿ ಡಾ. ಪ್ರವೀಣ ಗೋಡಖಿಂಡಿ ಹಾಗೂ ರವಿ ಕುಲಕರ್ಣಿ.
flute ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಂಡ ಕೊಳಲು ಡಾಟ್ ಕಾಮ್ (ಇಡಿ) ನಾಟಕದ ದೃಶ್ಯದಲ್ಲಿ ಡಾ. ಪ್ರವೀಣ ಗೋಡಖಿಂಡಿ ಹಾಗೂ ರವಿ ಕುಲಕರ್ಣಿ.
Published on

ಪ್ರಮುಖ ಮುಖ್ಯಾಂಶಗಳು

  • ನಗೆಗಡಲಲ್ಲಿ ತೇಲಿಸಿದ ಕೊಳಲು ಡಾಟ್ ಕಾಮ್ (ಇಡಿ) ನಾಟಕ ಪ್ರದರ್ಶನ
  • ನಾಟಕವನ್ನು ರಚಿಸಿ, ನಿರ್ದೇಶನ ಮಾಡಿ, ಸ್ವತಃ ಡಾ. ಪ್ರವೀಣ ಗೋಡಖಿಂಡಿ ಅವರು ನಟಿಸಿದ್ದಾರೆ.
  • ಮೊದಲ ಬಾರಿಗೆ ಬಣ್ಣ ಹಚ್ಚಿರುವ ಡಾ. ಪ್ರವೀಣ ಗೋಡಖಿಂಡಿ
ಹುಬ್ಬಳ್ಳಿ : flute ಬ್ಯಾಂಕ್ ನೌಕರಿಯಿಂದ ವಿಆರ್​ಎಸ್ ತೆಗೆದುಕೊಂಡ ಪ್ರದೀಪ ಬಾಡಗಂಡಿ ಅವರು ಸಂಗೀತದ ಅರಿವೇ ಇಲ್ಲದ ಕೃಷ್ಣ ಉರ್ಫ ಕಿಟ್ಟುಗೆ ಕೊಳಲು ಕಲಿಸಲು ಪಡುವ ಹರಸಾಹಸದ ಹಾಸ್ಯಮಯ ನಾಟಕವೇ ‘ಕೊಳಲು ಡಾಟ್ ಕಾಮ್ (ಇಡಿ)’.
ಅಂತಾರಾಷ್ಟ್ರೀಯ ಖ್ಯಾತಿಯ ಬಾನ್ಸುರಿ ವಾದಕ ಡಾ. ಪ್ರವೀಣ ಗೋಡಖಿಂಡಿ ಅವರ ವಿಶಿಷ್ಟ ಕಲ್ಪನೆಯ ಸಂಗೀತ ಮತ್ತು ಹಾಸ್ಯದ ಅಪರೂಪದ ಸಮ್ಮಿಲನದ ‘ಕೊಳಲು ಡಾಟ್ ಕಾಮ (ಇಡಿ)’ ನಾಟಕ ಶನಿವಾರದಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೇ ವತಿಯಿಂದ ಪ್ರದರ್ಶಿಸಲ್ಪಟ್ಟ ಈ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿ, ಪ್ರದೀಪ ಬಾಡಂಗಡಿ ಪಾತ್ರದಲ್ಲಿ ಸ್ವತಃ ಡಾ. ಪ್ರವೀಣ ಗೋಡಖಿಂಡಿ ಅವರು ನಟಿಸಿದ್ದಾರೆ.

ಅವರ ಶಿಷ್ಯನಾಗಿ ಕಿಟ್ಟುನ ಪಾತ್ರಕ್ಕೆ ಜೀವ ತುಂಬಿದ್ದಾರೆ ಪತ್ರಕರ್ತ ರವಿ ಕುಲಕರ್ಣಿ.

ಹಾಗೆ ನೋಡಿದರೆ, ಕಿಟ್ಟು ಪಾತ್ರ ನಟಿಸಬೇಕಾಗಿದ್ದು ಯಶವಂತ ಸರ್​ದೇಶಪಾಂಡೆ ಅವರು. ಯಶವಂತ ಸರ್​ದೇಶಪಾಂಡೆ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಡಾ. ಪ್ರವೀಣ ಗೋಡಖಿಂಡಿ ಅವರು ಈ ನಾಟಕ ರಚಿಸಿದ್ದರು.
ಆದರೆ, ಅವರ ಅಕಾಲಿಕ ನಿಧನದಿಂದಾಗಿ ಈ ನಾಟಕ ಮುಂದುವರೆಯದೇ ಸ್ಥಗಿತಗೊಂಡಿತ್ತು. ಇತ್ತೀಚೆಗೆ ದಿ. ಯಶವಂತ ಸರ್​ದೇಶಪಾಂಡೆ ಅವರ ಜನ್ಮದಿನದ ಅಂಗವಾಗಿ ಈ ನಾಟಕವನ್ನು ಪ್ರೇಕ್ಷಕರ ಮುಂದೆ ತರಬೇಕೆಂದು ನಿರ್ಧರಿಸಿ, ಮತ್ತೆ ಈ ಹಾಸ್ಯಮಯ ನಾಟಕಕ್ಕೆ ಜೀವ ತುಂಬಲಾಯಿತು ಎಂದು ಸಾರಿಕಾ ಗೋಡಖಿಂಡಿ ಅವರು ನಾಟಕದ ಪ್ರದರ್ಶನಕ್ಕೂ ಮುಂಚೆ ಹೇಳಿದರು.
ಪ್ರದೀಪ ಬಾಡಗಂಡಿ ಪಾತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಡಾ. ಪ್ರವೀಣ ಗೋಡಖಿಂಡಿ, ನಾಟಕದ ಉದ್ದಕ್ಕೂ ಅತ್ಯುತ್ತಮ ಅಭಿನಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಬ್ರಹ್ಮಚಾರಿಯಾಗಿರುವ ಪ್ರದೀಪ ಬಾಡಗಂಡಿ ಅವರಿಗೆ ಸಿಕ್ಕಿರುವ ಶಿಷ್ಯ ಕಿಟ್ಟು ಸಹ ಬ್ರಹ್ಮಚಾರಿ. ಗುರು, ಶಿಷ್ಯರಿಬ್ಬರೂ ಬ್ರಹ್ಮಚಾರಿ ಆಗಿ ಜೀವನ ಸಾಗಿಸುವ ಪರಿಯನ್ನು ಹಾಸ್ಯಮಯವಾಗಿ ಪ್ರೇಕ್ಷಕರ ಎದುರು ತಂದಿಟ್ಟರು.
ಗುರು ಪ್ರದೀಪ ಬಾಡಗಿಂಡಿ ಸಂಗೀತದ ಸರಿಗಮಪದನಿಸ ಕಲಿಸುವಾಗಿ, ಶಿಷ್ಯ ಕಿಟ್ಟು ಕೆಟ್ಟ ಧ್ವನಿಯಿಂದ ಹಾಡುವ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.
ಕಿಟ್ಟು ಸಂಗೀತ ಕಲಿಯುತ್ತಾನಾ ? ಗುರುಗಳಾದ ಪ್ರದೀಪ ಬಾಡಗಿಂಡಿ ಅವರು ತಮ್ಮ ಶಿಷ್ಯನಿಗೆ ಸಂಗೀತ ಕಲಿಸಲು ಯಾವ ರೀತಿ ಕಷ್ಟಪಡುತ್ತಾರೆ ಎಂಬ ಹಾಸ್ಯಮಯ ದೃಶ್ಯಗಳು ಈ ನಾಟಕದಲ್ಲಿ ಇವೆ.
ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ, ಗುರು-ಶಿಷ್ಯ ಪರಂಪರೆಯ ಕಥಾವಸ್ತು ಹೊಂದಿರುವ ಈ ನಾಟಕದಲ್ಲಿ ಹಿರಿಯ ರಂಗಕರ್ವಿು ದಿ. ಯಶವಂತ ಸರ್​ದೇಶಪಾಂಡೆ ಅವರು ನಟಿಸಬೇಕಿತ್ತು. ಅವರ ಅಕಾಲಿಕ ಸಾವಿನಿಂದಾಗಿ ನಾಟಕ ನಿಗದಿತ ಸಮಯಕ್ಕೆ ಪ್ರದರ್ಶನಗೊಳ್ಳದಾಯಿತು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶೇಷಗಿರಿ ಕುಲಕರ್ಣಿ, ವಿನಾಯಕ ನಾಯಕ ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net