kamadev: ನವಲಗುಂದ ಪಟ್ಟಣದ (Kamadev) ಶ್ರೀರಾಮಲಿಂಗ ಕಾಮದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರಯವ ಭಕ್ತರು.
Published on:
Copied
Follow Us
ನವಲಗುಂದ: ಪಟ್ಟಣದ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ರಾಮಲಿಂಗ ಕಾಮದೇವರ (kamadev) ದರ್ಶನಕ್ಕೆ ಭಾನುವಾರ ಭಕ್ತ ಸಾಗರವೇ ಹರಿಸು ಬಂದಿತ್ತು. ಬೆಳಗಿನ ಜಾವ 4 ಗಂಟೆಯಿಂದ ಸರದಿ ಸಾಳಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು.
ಇಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀರಾಮಲಿಂಗೇಶ್ವರ ದರ್ಶನ ಪಡೆದರೆ ಸಂತಾನ ಭಾಗ್ಯ, ಸಂಪತ್ತು ಭಾಗ್ಯ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.
ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ನೇತೃತ್ವದ ತಂಡದಿಂದ ಇಷ್ಟಾರ್ಥ ಪೂರೈಸುವ ಕಾಮ-ರತಿ ದರ್ಶನ.
ರಾಮಲಿಂಗ ಕಾಮಣ್ಣನ ದರ್ಶನ ಪಡೆದು ಮಾತನಾಡಿದ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ, ‘ಪುರಾತನ ಕಾಲದಿಂದಲೂ ನವಲಗುಂದದಲ್ಲಿ ವಿಶೇಷವಾಗಿ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ. ಇಲ್ಲಿನ ರಾಮಲಿಂಗ ಕಾಮಣ್ಣನ ಶಕ್ತಿ ರಾಜ್ಯ, ಹೊರರಾಜ್ಯಕ್ಕೂ ಪಸರಿಸುತ್ತಿರುವುದು ವಿಶೇಷ ಎಂದರು.