ಬೆನ್ನುಮೂಳೆ ಸಮಸ್ಯೆ ನಿವಾರಣೆಗೆ ಸುವರ್ಣಾವಕಾಶ

ಡಿಎಚ್ಒ ಕಚೇರಿ, ಬುಧವಾರ ಉಚಿತ ಬೆನ್ನುಮೂಳೆ ನ್ಯೂನತೆ ತಪಾಸಣಾ ಶಿಬಿರ ನಡೆಯಿತು.
ಡಿಎಚ್ಒ ಕಚೇರಿ, ಬುಧವಾರ ಉಚಿತ ಬೆನ್ನುಮೂಳೆ ನ್ಯೂನತೆ ತಪಾಸಣಾ ಶಿಬಿರ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಶಿಬಿರದಲ್ಲಿ ಡಿಎಚ್ ಒ ಡಾ.ಟಿ.ಲಿಂಗರಾಜು ಕರೆ
ಹೊಸಪೇಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬುಧವಾರ ಉಚಿತ ಬೆನ್ನುಮೂಳೆ ನ್ಯೂನತೆ ತಪಾಸಣಾ ಶಿಬಿರ ನಡೆಯಿತು.
ಡಿಎಚ್ ಒ ಡಾ.ಟಿ.ಲಿಂಗರಾಜು ಮಾತನಾಡಿ, ಸಾಮಾನ್ಯವಾಗಿ ಪ್ರತಿಯೊಬ್ಬರ ಬೆನ್ನುಮೂಳೆಯು ವಕ್ರತೆಯನ್ನು ಹೊಂದಿದ್ದು, ಹಿಂದಿನಿಂದ ನೋಡಿದಾಗ ನೇರವಾಗಿ ಕಾಣಿಸುತ್ತದೆ. ಆದರೆ ಸ್ಕೋಲಿಯೋಸಿಸ್ ಸಮಸ್ಯೆಯಿರುವ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಬೆನ್ನುಮೂಳೆಯು ಅಸಹಜವಾಗಿ ಎಸ್ ಅಥವಾ ಸಿ ಆಕಾರಕ್ಕೆ ವಕ್ರವಾಗಿರುತ್ತದೆ. ಈ ರೋಗದ ಲಕ್ಷಣಗಳು, ಅಗತ್ಯ ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶ ಎಂದರು.
ಇಲ್ಲಿಯವರೆಗೆ 9 ಮಕ್ಕಳು ಹೊಸದಾಗಿ ನೋಂದಾಯಿಸಿಕೊಂಡಿದ್ದು, ಅವರಲ್ಲಿ ನಾಲ್ಕು ಮಕ್ಕಳಿಗೆ ಫಾಲೋ-ಅಪ್ ತಪಾಸಣೆ ನಡೆಸಿ ಚಿಕಿತ್ಸೆಗೆ ಸೂಚಿಸಲಾಗಿದೆ. ಒಟ್ಟು ಏಳು ಪ್ರಕರಣಗಳನ್ನು ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದ್ದು, ಇಬ್ಬರನ್ನು ಎಕ್ಸ್-ರೇ ತಪಾಸಣೆಗೆ ಒಳಪಡಿಸಲಾಗಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಸುಮಾರು ನಾಲ್ಕರಿಂದ ಐದು ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ನೆರವಾಗಲು ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
05 ಮಂಜು 03
ಹೊಸಪೇಟೆಯಲ್ಲಿ ಬುಧವಾರ ಉಚಿತ ಬೆನ್ನುಮೂಳೆ ನ್ಯೂನತೆ ತಪಾಸಣಾ ಶಿಬಿರವನ್ನು ಡಿಎಚ್ ಒ ಡಾ.ಟಿ.ಲಿಂಗರಾಜು ಉದ್ಘಾಟಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ರಾಧಿಕಾ, ಅರಿವಳಿಕೆ ತಜ್ಞರಾದ ಡಾ.ನೂರ್ ಪಾಷಾ ಇತರರಿದ್ದರು.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net