ವರಕವಿ ಡಾ. ದ.ರಾ. ಬೇಂದ್ರೆ ಅವರು ಬರೆದ ನಾಟಕ ‘ಸಾಯೋ ಆಟ’ ಪ್ರಕಟಣೆೆಗೊಂಡು 2026ನೇ ವರ್ಷಕ್ಕೆ ಶತಮಾನೋತ್ಸವ ಕಂಡ ನೆನಪಿಗಾಗಿ ಗೋಕುಲ ರಸ್ತೆಯ ಡಾ. ಕೆ.ಎಸ್. ಶರ್ಮಾ ಸಭಾಭವನದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಬೇಂದ್ರೆ ನಾಟ್ಯ ಯೋಗ ಸಿದ್ಧಾಂತದ ಬಗ್ಗೆ ಮಾತಾನಾಡಿ, ಕಾರ್ಯಕ್ರಮ ಆಯೋಜಿಸಿದ ಕಲಾ ಬಳಗದ ಸೇವೆ ಅನನ್ಯ ಎಂದರು.
ನಿವೃತ್ತ ಪ್ರಾಧ್ಯಾಪಕ ಮಧುಕರ ಎಕ್ಕುಂಡಿ ಹಾಗೂ ಜಾನಪದ ತಜ್ಞ ಡಾ. ರಾಮು ಮೂಲಗಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ನಾಟಕ ನಿರ್ದೇಶನವನ್ನ ಸುಬಾಸ ಮೇಹರವಾಡೆ , ಸಂಗೀತ ಮಂಜುನಾಥ ಇಂಗಳಳ್ಳಿ, ಹಿನ್ನೆಲೆ ಗಾಯನ ತುಕಾರಾಮ ಕಟಾರೆ, ಪ್ರಸಾಧನ ಹರೀಶ ಧುಳೆ ನೆರವೇರಿಸಿದರು.