sky ಗಗನದಲ್ಲಿ ಹಾರಾಡಿದ ಡಾಲ್ಪಿನ್, ಡ್ರ್ಯಾಗನ್

sky ಹುಬ್ಬಳ್ಳಿಯ ಕುಸುಗಲ್ಲ ರಸ್ತೆ ಬಳಿ ಆಯೋಜಿಸಿರುವ ಗಾಳಿಪಟ ಉತ್ಸವವನ್ನು ಬಸವರಾಜ ಹೊರಟ್ಟಿ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್, ಇತರರಿದ್ದರು.
sky ಹುಬ್ಬಳ್ಳಿಯ ಕುಸುಗಲ್ಲ ರಸ್ತೆ ಬಳಿ ಆಯೋಜಿಸಿರುವ ಗಾಳಿಪಟ ಉತ್ಸವವನ್ನು ಬಸವರಾಜ ಹೊರಟ್ಟಿ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2 ದಿನಗಳ ಗಾಳಿ ಪಟ ಉತ್ಸವಕ್ಕೆ ಚಾಲನೆ
  • ಹುಬ್ಬಳ್ಳಿಗೆ ತಂದವರು ಜೋಶಿ
  • ತರಹೇವಾರಿ ಚಿತ್ರಗಳನ್ನು ಮಕ್ಕಳು ಬಿಡಿಸಿದ್ದರು.
ಇಲ್ಲಿನ ಕುಸುಗಲ್ ರಸ್ತೆಯ ಆಕ್ಸ್​ಫರ್ಡ್ ಕಾಲೇಜು ಪಕ್ಕದ ಮೈದಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಆಯೋಜಿಸಿರುವ 2 ದಿನಗಳ ಗಾಳಿಪಟ ಉತವ್ಸವ-2026ರಲ್ಲಿ ದೇಶ-ವಿದೇಶದ 30ಕ್ಕೂ ಹೆಚ್ಚು ಕೈಟ್ ಫ್ಲೈಯರ್ಸ್ ಹಲವಾರು ಮಾದರಿಯ ಗಾಳಿಪಟಗಳನ್ನು ಹಾರಿಸಿದರು.
ಥಾಯ್ಲೆಂಡ್, ನೆದರ್ಲೆಂಡ್, ಇಂಗ್ಲೆಂಡ್, ಇಂಡೊನೇಷ್ಯಾ, ಟ್ಯುನಿಷಿಯಾ ದೇಶಗಳ ಕೈಟ್ ಫ್ಲೈಯರ್ಸ್ ತರಹೇವಾರಿ ಗಾಳಿಪಟಗಳನ್ನು ಆಗಸದಲ್ಲಿ ತೇಲಿಬಿಟ್ಟರು.
ಅಷ್ಟೇ ಅಲ್ಲದೇ, ಕರ್ನಾಟಕದ ಮೂಲೆ ಮೂಲೆಗಳಿಂದಲೂ ಪಾಲ್ಗೊಂಡಿದ್ದರು. ಪಕ್ಕದ ಮಹಾರಾಷ್ಟ್ರ, ಗುಜರಾತ್​ನಿಂದಲೂ ಗಾಳಿಪಟದೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಪರೇಷನ್ ಸಿಂಧೂರ, ಸರ್ಜಿಕಲ್ ಸ್ಟ್ರೈಕ್, ಪ್ರಧಾನಿ ನರೇಂದ್ರ ಮೋದಿ, ಗ್ರಾಮೀಣ ಸೊಗಡು ಸೇರಿದಂತೆ ತರಹೇವಾರಿ ಚಿತ್ರಗಳನ್ನು ಮಕ್ಕಳು ಬಿಡಿಸಿದ್ದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ ಹಾಗೂ ಇನ್ನಿತರರು ಗಾಳಿಪಟ ಹಾರಿಸಿ, ಸಂಭ್ರಮಿಸಿದರು.
ಹುಬ್ಬಳ್ಳಿಗೆ ತಂದವರು ಜೋಶಿ : ರಾಜಸ್ಥಾನ, ಗುಜರಾತ್​ಗೆ ಸೀಮಿತವಾಗಿದ್ದ ಗಾಳಿಪಟ ಉತ್ಸವವನ್ನು ಹುಬ್ಬಳ್ಳಿಗೆ ತಂದ ಕೀರ್ತಿ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸಲ್ಲುತ್ತದೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದಕ್ಕೆ ಪ್ರಲ್ಹಾದ ಜೋಶಿ ಮಾದರಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಳಿಪಟ ಉತ್ಸವ -2026 ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮಾನಸಿಕವಾಗಿ, ಶಾರೀಕವಾಗಿ ಸದೃಢರನ್ನಾಗಿಸಲು ಇಂತಹ ಉತ್ಸವಗಳು ಸಹಕಾರಿಯಾಗಲಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಕ್ಕಳು ಕೇವಲ ಪುಸ್ತಕದ ಹುಳುವಾಗದೇ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬಲ್ಲ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಂಸ್ಕತಿ, ಪರಂಪರೆ ಮತ್ತು ದೇಸಿ ಕ್ರೀಡೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಸತತವಾಗಿ ಗಾಳಿಪಟ ಮತ್ತು ಸಾಂಸ್ಕೃತಿಕ ಉತ್ಸವ ಆಯೋಜಿಸುತ್ತಿರುವುದಾಗಿ ತಿಳಿಸಿದರು.
ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ಜೊ್ಯೕತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಕೆಎಲ್​ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವೀರಣ್ಣ ಸವಡಿ, ಗೋವಿಂದ ಜೋಶಿ, ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ನಿಂಗಪ್ಪ ಸುತಗಟ್ಟಿ, ವಸಂತ ಹೊರಟ್ಟಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಡಾ. ಶಾಂತಣ್ಣ ಕಡಿವಾಳ, ಮಾಜಿ ಶಾಸಕರಾದ ಅಶೋಕ ಕಾಟವೆ, ಅಮೃತ ದೇಸಾಯಿ, ಸೀಮಾ ಮಸೂತಿ, ನಾಗರಾಜ ಛಬ್ಬಿ ಹಾಗೂ ಇತರರಿದ್ದರು. ಸಂದೀಪ ಬೂದಿಹಾಳ ನಿರೂಪಿಸಿದರು.
ಸಂಸದ ಕ್ರೀಡಾ ಮಹೋತ್ಸವದ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರ ಮಟ್ಟದಲ್ಲಿ ದೇಸಿ ಕ್ರೀಡೆಗಳಾದ ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ ಜಗ್ಗಾಟ, ಚಿನ್ನಿ ದಾಂಡು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net