ನಗರದ ಅನಂತ ರೆಸಿಡೆನ್ಸಿಯ ಮೂರನೇ ಮಹಡಿಯ ಅರ್ಜುನ ಹಾಲ್‌ನಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕರುಣಾ ಕೇಶವ ದೇಸಾಯಿ, ಟಿಡಿಎಫ್ ತನ್ನ ಅತ್ಯುತ್ತಮ ವಜ್ರದ ಆಭರಣ ಪ್ರದರ್ಶನವನ್ನು ಆಯೋಜಿಸಿದೆ. ಇಲ್ಲಿ ಅತ್ಯುತ್ಕರ್ಷ ಆಭರಣಗಳಿವೆ. ಮಹಿಳೆಯರು ಅದರಲ್ಲಿಯೂ ವಧುಗಳ ಮನಕ್ಕೊಪ್ಪುವ ಆಭರಣಗಳಿವೆ. ಆಭರಣ ಪ್ರಿಯರು ಸದುಪಯೋಗ ಪಡೆದುಕೊಳ್ಳಬಹುದು ಎಂದರು.