ಸಾರ್ವಜನಿಕರಿಂದ 87 ಅಹವಾಲು ಸ್ವೀಕಾರ

ಸಚಿವ ಸಂತೋಷ ಲಾಡ್​ ಅಧ್ಯಕ್ಷತೆಯಲ್ಲಿ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಸಚಿವ ಸಂತೋಷ ಲಾಡ್​ ಅಧ್ಯಕ್ಷತೆಯಲ್ಲಿ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
Published on
ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 87 ಅಹವಾಲುಗಳನ್ನು ಸ್ವೀಕರಿಸಲಾಯಿತು.
ಕಂದಾಯ ಇಲಾಖೆಯ 21, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ 20, ನಗರಾಭಿವದ್ಧಿ ಇಲಾಖೆಯ 19, ವಸತಿ ಇಲಾಖೆಯ 7, ಸಾರಿಗೆ ಇಲಾಖೆಯ 4, ಗಹ, ಇಂಧನ ಇಲಾಖೆಯ 3 ಹಾಗೂ ಕಷಿ, ಶಾಲಾ ಶಿಣ ಇಲಾಖೆ, ಆಹಾರ ಇಲಾಖೆಯ 2, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ, ಆರೋಗ್ಯ, ಕಾಮಿರ್ಕ ಇಲಾಖೆಗಳ ತಲಾ 1 ಅಹವಾಲುಗಳು ಸಲ್ಲಿಕೆಯಾದವು. ಸ್ವೀಕೃತ ಅಜಿರ್ಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಸಚಿವ ಸಂತೋಷ ಲಾಡ್​ ಅಸಮಾಧಾನ:
ಅಹವಾಲು ಸ್ವೀಕಾರದ ನಂತರ ಮಾತನಾಡಿದ ಸಚಿವ ಲಾಡ್​ ಕೆಲ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ, ನಿಮಗೆ ಸಿಗುವ ಸಂಬಳ, ಸವಲತ್ತು ಸಾರ್ವಜನಿಕರಿಂದ ಬಂದಿದ್ದು. ನಮ್ಮ ಕರ್ತವ್ಯಗಳನ್ನು ಮಾನವೀಯತೆ, ಆತ್ಮಸಾಯಿಂದ ಮಾಡಬೇಕು. ವಿನಾಕಾರಣ ವಿಳಂಬ, ಕರ್ತವ್ಯದಲ್ಲಿ ಆಲಸ್ಯ ತೋರಿಸುವ ಅಧಿಕಾರಿ, ಸಿಬ್ಬಂದಿ ಮನೆಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳೊಂದಿಗೆ ಬಂದು ಅಹವಾಲು ಸಲ್ಲಿಸುತ್ತಿದ್ದಾರೆ. ಜನತಾ ದರ್ಶನದಲ್ಲಿ ಬರುವ ಅಜಿರ್ಗಳನ್ನು ಗಮನಿಸಿದಾಗ, ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸಲ್ಲಿಕೆ ಆಗುವ ಅಹವಾಲುಗಳನ್ನು ಸರಿಯಾಗಿ ಪರಿಶೀಲಿಸಿ, ಪರಿಹಾರ ನೀಡಬೇಕು. ಬೇರೆ ಹಂತಕ್ಕೆ ಅಜಿರ್ ರವಾನಿಸಬೇಕಾದಲ್ಲಿ ಅಜಿರ್ದಾರನಿಗೆ ತಿಳಿವಳಿಕೆ ನೀಡಬೇಕು. ಆದರೆ, ಅಧಿಕಾರಿಗಳು ಯಾಂತ್ರಿಕವಾಗಿ ವತಿರ್ಸುತ್ತಿದ್ದಾರೆ ಎಂಬುದು ಸಲ್ಲಿಕೆ ಆಗುತ್ತಿರುವ ಅಜಿರ್ಗಳಿಂದ ತಿಳಿದುಬರುತ್ತಿದೆ. ಕರ್ತವ್ಯದಲ್ಲಿ ಅಶಿಸ್ತು ತೋರುವವರ ವಿರುದ್ಧ ಶಿಸ್ತು ಕ್ರಮ ಕೆಗೊಳ್ಳಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ನೇಹಲ್​ ಆರ್​., ಜಿ.ಪಂ. ಸಿಇಒ ಭುವನೇಶ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net