

ಪ್ರಮುಖ ಮುಖ್ಯಾಂಶಗಳು
2026ರ ಜನವರಿಜುಲೈ ಅವಧಿಯಲ್ಲಿ ನಿಗದಿತ ಗುರಿ ಮೀರಿ ಶೇ. 124ರಷ್ಟು (43,840 ಜನರು) ಸ್ಕ್ರೀನಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಸಧ್ಯ ಶೇ. 88ರಷ್ಟಿದೆ ಎಂದು ಹೇಳಿದರು.
ಟಿಬಿ ಮುಕ್ತ ಗುರಿ ತಲುಪಲು ‘ನಿಕ್ಷಯ್ ಮಿತ್ರ’ ಯೋಜನೆ ಮೂಲಕ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ಕ್ಷಯ ಮುಕ್ತ ಭಾರತ’ದ ಕನಸನ್ನು ಸಾಕಾರಗೊಳಿಸಲು ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಸದಾ ಬದ್ಧರಾಗಿದ್ದೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಭರವಸೆ ವ್ಯಕ್ತಪಡಿಸಿದರು.
ಕ್ಷಯ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ವದೇಶಿ ಸಂಶೋಧನೆ, ಎಐ ಆಧಾರಿತ ತಪಾಸಣೆ ಹಾಗೂ ರೋಗಿಗಳಿಗೆ ಉತ್ತಮ ಆಧುನಿಕ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಮೂಲಕ ಟಿಬಿ ಮುಕ್ತ ಭಾರತದ ಧ್ಯೇಯಕ್ಕೆ ಎರಡೂ ರಾಜ್ಯಗಳ ಸಂಸದರು ಸಂಕಲ್ಪ ಮಾಡಿದರು.
ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸುರೇಶ ಗೋಪಿ, ಅನುಪ್ರಿಯ ಪಟೇಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.