50ಕ್ಕೂ ಹೆಚ್ಚು ಕಡತಗಳಿಗೆ ಮುಕ್ತಿ

ಬಾಕಿ ಕಡತಗಳನ್ನು ಪರಿಶೀಲಿಸಲಾಯಿತು
tahasildar office
ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಮಹೇಶ ಗಸ್ತೆ ನೇತೃತ್ವದಲ್ಲಿ ಭಾನುವಾರ ಬಾಕಿ ಉಳಿದ ಕಡತಗಳ ವಿಲೇವಾರಿ ಪ್ರಕ್ರಿಯೆ ನಡೆಯಿತು.
Published on: 

ಹುಬ್ಬಳ್ಳಿ: ಇಲ್ಲಿಯ ಮಿನಿವಿಧಾನ ಸೌಧದ ಶಹರ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಕಡತ ವಿಲೇವಾರಿ ಪ್ರಕ್ರಿಯೆ ನಡೆದಿದ್ದು, ಒಟ್ಟಾರೆ ವಿವಿಧ ವಿಭಾಗದ 50ಕ್ಕೂ ಹೆಚ್ಚು ಕಡತಗಳಿಗೆ ಮುಕ್ತಿ ನೀಡಲಾಗಿದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಧಿಕಾರಿ, ಕಂದಾಯ ನಿರೀಕ್ಷಕರು, ಶಿರಸ್ತೇದಾರ್, ಗ್ರೇಡ್ 2 ತಹಸೀಲ್ದಾರ್ ಬಳಿ ಉಳಿದಿದ್ದ ಬಾಕಿ ಕಡತಗಳನ್ನು ಪರಿಶೀಲಿಸಲಾಯಿತು. ಟೇಬಲ್ ಮೇಲಿದ್ದ ಹಾಗೂ ಆನ್‌ಲೈನ್‌ನಲ್ಲಿ ಬಾಕಿ ಕಡತಗಳನ್ನು ಶಹರ ತಹಸೀಲ್ದಾರ್ ಮಹೇಶ ಗಸ್ತೆ ಅವರು ಪರಿಶೀಲಿಸಿ, ವಿಲೇವಾರಿ ಮಾಡಿದರು. 30ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಬಾಕಿ ಉಳಿದಿದ್ದ ಕಡತಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಜನರ ಸಮಸ್ಯೆಗೆ ಕಿವಿಯಾಗುವ ದೃಷ್ಟಿಯಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೆ ಮುಕ್ತಿ ನೀಡಲಾಗಿದೆ. ಭಾನುವಾರವೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದು, ಕಡತ ವಿಲೇವಾರಿ ಪ್ರಕ್ರಿಯೆ ತ್ವರಿತಗೊಳ್ಳಲು ಸಾಧ್ಯವಾಗಿದೆ ಎಂದು ಶಹರ ತಹಸೀಲ್ದಾರ್ ಮಹೇಶ ಗಸ್ತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net