ಜೈನ (jain temple) ಮಂದಿರದಲ್ಲಿ 50ನೇ ದೀಪೋತ್ಸವ

ಕೇಶ್ವಾಪುರದ (jain temple)​ ಶ್ರೀ ನಾಕೋಡ ಪಾರ್ಶ್ವನಾಥ್​ ಜೈನ್​ ಮಂದಿರದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭ್ರಮದ ದೀಪೋತ್ಸವ ನಡೆಯಿತು.
ಕೇಶ್ವಾಪುರದ (jain temple)​ ಶ್ರೀ ನಾಕೋಡ ಪಾರ್ಶ್ವನಾಥ್​ ಜೈನ್​ ಮಂದಿರದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭ್ರಮದ ದೀಪೋತ್ಸವ ನಡೆಯಿತು.
Published on
ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಶ್ರೀ ನಾಕೋಡ (jain temple) ಪಾರ್ಶ್ವನಾಥ್​ ಜೈನ್​ ಮಂದಿರದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭ್ರಮದ ದೀಪೋತ್ಸವ ನಡೆಯಿತು. ನೂರಾರು ಮಹಿಳೆಯರು ಮತ್ತು ಪುರುಷರು ದೀಪ ಬೆಳಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜೈನ ಮಂದಿರದ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗುಡಿಯನ್ನು ಶಾ ಕೇಸರಿಮಲ್​ ನವಾಜಿ ಅವರ ನೇತೃತ್ವದಲ್ಲಿ ಐವತ್ತು ವರ್ಷ ಹಿಂದೆ ಕಟ್ಟಿಸಲಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಭಾರತದ ಪ್ರಮುಖ ಮುನಿಗಳಾದ ಶ್ರೀ ಭದ್ರಾನಂದ ವಿಜಯಜಿ ಮುನಿಗಳು ಈ ಗುಡಿಯ ಪ್ರತಿಷ್ಠಾಪನೆ ಮಾಡಿದ್ದರು.
ಸುವರ್ಣ ಮಹೋತ್ಸವ ಆಚರಣೆಯನ್ನು 50 ದಿನಗಳಿಂದ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿ ದಿನ ಮನೆಮನೆಯಲ್ಲಿ ಗುಡಿಯ ಧ್ವಜ ದೇವರ ದರ್ಶನ ಮಾಡಲಾಯಿತು. ಮಹಾ ಪ್ರಸಾದ ನೆರವೇರಿಸಲಾಯಿತು.
50ನೇ ವರ್ಷದ ಸುವರ್ಣ ಮಹೋತ್ಸವ ಮಹಾ ಆರತಿಯಲ್ಲಿ ಜೈನ್​ ಸಮುದಾಯದ 3000 ಜನರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಗುಡಿಯ ಪ್ರಮುಖ ವಿವೇಕ ರಣಜೇತಮಲ ಶಾಹ ಪರಿವಾರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.
ಅವರಿಗೆ ಹುಬ್ಬಳ್ಳಿಯ ಜೈನ ಸಮಾಜದ ಜನರು ಸಹಕಾರ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net