ಬಿಆರ್​ಟಿಎಸ್​ ಚಾಲಕನ ಅವಾಂತರಕ್ಕೆ 5 ಬೈಕ್​, 2 ಅಂಗಡಿಗಳು ಜಖಂ

ಧಾರವಾಡದ ಅಂಜುಮನ್​ ಕಾಂಪ್ಲೆಕ್ಸ್​ ಬಳಿ ಬಿಆರ್​ಟಿಎಸ್​ ಬಸ್​ ಡಿಕ್ಕಿಯಿಂದ ನಜ್ಜುಗುಜ್ಜಾದ ಬೈಕ್​ಗಳು.
ಧಾರವಾಡದ ಅಂಜುಮನ್​ ಕಾಂಪ್ಲೆಕ್ಸ್​ ಬಳಿ ಬಿಆರ್​ಟಿಎಸ್​ ಬಸ್​ ಡಿಕ್ಕಿಯಿಂದ ನಜ್ಜುಗುಜ್ಜಾದ ಬೈಕ್​ಗಳು.
Published on

ಧಾರವಾಡ: ನಗರದ ಬಿಆರ್​ಟಿಎಸ್​ ಟರ್ಮಿನಲ್​ ಬಳಿ ನಿಲ್ಲಿಸಿದ್ದ ಬಿಆರ್​ಟಿಎಸ್​ ಚಿಗರಿ ಬಸ್​ ಮುಂದೆ ಚಲಿಸಿದ ಪರಿಣಾಮ ಪಾದಚಾರಿ ಗಾಯಗೊಂಡು, ರಸ್ತೆ ಬದಿ ನಿಲ್ಲಿಸಿದ್ದ 5 ಬೈಕ್​ಗಳು ಹಾಗೂ 2 ಅಂಗಡಿಗಳು ಜಖಂಗೊಂಡ ಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಬಿಆರ್​ಟಿಎಸ್​ ಟರ್ಮಿನಲ್ ನಲ್ಲಿ ಹೆಚ್ಚಿನ ಚಿಗರಿ ಬಸ್​ಗಳಿದ್ದ ಕಾರಣ ಚಾಲಕ ಹೊರಗಡೆ ಬಸ್​ ನಿಲ್ಲಿಸಿ ಹೋಗಿದ್ದ ಎನ್ನಲಾಗಿದೆ. ಹ್ಯಾಂಡ್​ ಬ್ರೇಕ್​ ಹಾಕದ ಕಾರಣ ಇಳಿಜಾರಿನಲ್ಲಿದ್ದ ಬಸ್​ ಏಕಾಏಕಿ ಮುಂದೆ ಚಲಿಸಿದೆ. ಅಂಜುಮನ್​ ಕಾಂಪ್ಲೆಕ್ಸ್​ ಎದುರು ನಡೆದು ಹೋಗುತ್ತಿದ್ದ ನಗರದ ಹೆಬ್ಬಳ್ಳಿ ಅಗಸಿ ನಿವಾಸಿ ಬಸವರಾಜ ತಡಕೋಡ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಆತನ ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಳಿಯರು ರಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಟನೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ 5 ಬೈಕ್​ಗಳು ಜಖಂಗೊಂಡಿವೆ. ಅಲ್ಲದೆ, ರಸ್ತೆ ಬದಿ ಇದ್ದ 2 ಬ್ಯಾಗ್​ ರಿಪೇರಿ ಅಂಗಡಿಗಳಿಗೂ ಹಾನಿಯಾಗಿದೆ.
ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಸಂಚಾರ ಸುಗಮಗೊಳಿಸಿದರು. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net