ಚನ್ನಮ್ಮ ಹೆಡೆ ಬೈಲೂರಗೆ 2 ಚಿನ್ನ, 3 ಬೆಳ್ಳಿ

Channamma
Channamma
Published on

ಪ್ರಮುಖ ಮುಖ್ಯಾಂಶಗಳು

  • 45ನೇ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟ
  • ಚನ್ನಮ್ಮ ಹೆಡೆ ಬೈಲೂರಗೆ 2 ಚಿನ್ನ, 3 ಬೆಳ್ಳಿ
  • ಹುಡುಗಿಯರ ಜತೆ 4*100 ಮೀಟರ್ ರಿಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಧಾರವಾಡ: ವೆಟ್ರನ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಬಳ್ಳಾರಿಯ ವೆಟ್ರನ್ ಅಥ್ಲೆಟಿಕ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಜರುಗಿದ 45ನೇ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಲ್ಲಿಯ ಚನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚನ್ನಮ್ಮ ಹೆಡೆ ಬೈಲೂರ ಅವರು 2 ಚಿನ್ನ ಹಾಗೂ 3 ಬೆಳ್ಳಿ ಪದಕ ಗಳಿಸಿದ್ದಾರೆ. 70 ವರ್ಷ ಮೇಲ್ಪಟ್ಟ ವಯೋಮಾನದ ತೀವ್ರ ನಡಿಗೆ ಸ್ಪರ್ಧೆಯಲ್ಲಿ 3 ಕಿ.ಮೀ. ಅಂತರವನ್ನು 32 ನಿಮಿಷ 7.5 ಸೆಕೆಂಡುಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. 65 ವರ್ಷ ಮೇಲ್ಪಟ್ಟ ವಯೋಮಾನದವರ ಮಿಕ್ಸಡ್ ಡಬಲ್‌ 4*100 ಮೀ. ರಿಲೆ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು. 70 ವರ್ಷ ಮೇಲ್ಪಟ್ಟ ವಯೋಮಾನದವರ ಕಬ್ಬಿಣ ಗುಂಡು ಎಸೆತ ಸ್ಪರ್ಧೆಯಲ್ಲಿ ಹಾಗೂ ಸರಪಳಿಯುಕ್ತ ಕಬ್ಬಿಣ ಗುಂಡು ಎಸೆತ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 30ವರ್ಷ ವಯೋಮಾನದ ಹುಡುಗಿಯರ ಜತೆ 4*100 ಮೀಟರ್ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net