ಲೋಕ ಅದಾಲತ್​ನಲ್ಲಿ 366 ಪ್ರಕರಣ ಇತ್ಯರ್ಥ

ಧಾರವಾಡ ಹೈಕೋರ್ಟ್​ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎಸ್​. ಸುನಿಲ್​ ದತ್​ ಯಾದವ ಅವರ ನೇತೃತ್ವದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಮೂತಿರ್ಗಳು, ಲೋಕ ಅದಾಲತ್​ನ ಸದಸ್ಯರು ಮತ್ತು ಪಕ್ಷಗಾರರು ಪಾಲ್ಗೊಂಡಿದ್ದರು.
ಧಾರವಾಡ ಹೈಕೋರ್ಟ್​ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎಸ್​. ಸುನಿಲ್​ ದತ್​ ಯಾದವ ಅವರ ನೇತೃತ್ವದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಮೂತಿರ್ಗಳು, ಲೋಕ ಅದಾಲತ್​ನ ಸದಸ್ಯರು ಮತ್ತು ಪಕ್ಷಗಾರರು ಪಾಲ್ಗೊಂಡಿದ್ದರು.
Published on
ಧಾರವಾಡ: ಧಾರವಾಡ ಹೈಕೋರ್ಟ್​ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎಸ್​. ಸುನಿಲ್​ ದತ್​ ಯಾದವ ಅವರ ನೇತೃತ್ವದಲ್ಲಿ ಜು. 11ರಂದು ರಾಷ್ಟ್ರೀಯ ಲೋಕ ಅದಾಲತ್​ ಏರ್ಪಡಿಸಲಾಗಿತ್ತು.
ಅದಾಲತ್​ನಲ್ಲಿ ನ್ಯಾಯಮೂರ್ತಿಳಾದ ಸಚಿನ ಶಂಕರ ಮಗದುಮ್​, ಸಿ.ಎಂ. ಪೂನಚ್ಚ ಮತ್ತು ಗೀತಾ ಕೆ.ಬಿ. ಹಾಗೂ ಅವರೊಂದಿಗೆ ಲೋಕ ಅದಾಲತ್​ನ ಸದಸ್ಯರಾದ ಕೆ.ಎಲ್​. ಪಾಟೀಲ, ಸಾಜಿದ ಗೂಡವಾಲಾ, ಎಂ.ಎಸ್​. ಹಳ್ಳಿಕೇರಿ ಮತ್ತು ವಿದ್ಯಾವತಿ ಕೊಟ್ಟೂರಶೆಟ್ಟರ ವಕೀಲರನ್ನೊಳಗೊಂಡ 4 ಪೀಠಗಳನ್ನು ಆಯೋಜಿಸಲಾಗಿತ್ತು. ಒಟ್ಟು 1,037 ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಿ ಈ ಪೈಕಿ 366 ಪ್ರಕರಣಗಳನ್ನು 16,62,34,920 ರೂಪಾಯಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ಲೋಕ ಅದಾಲತ್​ನಲ್ಲಿ ಅಪಘಾತ ಪರಿಹಾರ ಪ್ರಕರಣಗಳ ಜತೆಗೆ ಭೂಸ್ವಾಧಿನ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಭೂಸ್ವಾಧಿನ ಪ್ರಕರಣಗಳಿಗೆ ಸಂಬಂಧಿಸಿ ಭೂಮಾಲಿಕರು ಹಾಗೂ ಸರ್ಕಾರ ಸಲ್ಲಿಸಿದ್ದ ಒಟ್ಟು 46 ಮೇಲ್ಮನವಿಗಳನ್ನು ರೈತರು ಮತ್ತು ಭೂಸ್ವಾಧಿನ ಅಧಿಕಾರಿಗಳ ನಡುವೆ ಸಮಾಲೋಚನೆ ನಡೆಸಿ ಇತ್ಯರ್ಥಗೊಳಿಸಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನೌಕರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಹಲವಾರು ರಿಟ್​ ಅಜಿರ್ಗಳನ್ನು ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದ 2 ಹಳೆಯ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಉಭಯ ಪಗಾರರಿಗೆ ತಿಳಿವಳಿಕೆ ನೀಡಿ ಪರಸ್ಪರರು ಕೌಟುಂಬಿಕ ಸಂಬಂಧಗಳನ್ನು ಸೌಹಾರ್ದಯುತವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಲಾಯಿತು ಎಂದು ಹೈಕೋರ್ಟ್​ ಕಾನೂನು ಸೇವಾ ಸಮಿತಿಯ ಕಾರ್ಯದಶಿರ್ ಮತ್ತು ಅಧಿಕ ವಿಲೇಖನಾಧಿಕಾರಿ ಜೆರಾಲ್ಡ್​ ರುಡಾಲ್ಫ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net