3,270 ಎಕರೆ ಭೂಮಿ ಹಸ್ತಾಂತರ ಬಾಕಿ handover

handover ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ. ಅನಂತ
handover ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ. ಅನಂತ
Published on

ಪ್ರಮುಖ ಮುಖ್ಯಾಂಶಗಳು

  • ಶೇ. 89ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದೆ.
  • 6 ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳನ್ನಾಗಿ ಬದಲಾಯಿಸಲಾಗಿದೆ.
  • 27 ಮೆಮು ರೈಲುಗಳ ಸಂಚಾರಕ್ಕೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ. ಅನಂತ ಅವರು ಇಲ್ಲಿನ ರೈಲ್ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇ. 89ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಘಾಟ್ ಪ್ರದೇಶದ ವಿವಿಧೆಡೆ ವಿದ್ಯುದ್ದೀಕರಣ ಕಾಮಗಾರಿ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್​ವೊಳಗಾಗಿ ಇನ್ನೂ ಶೇ. 8ರಷ್ಟು ಇಲೆಕ್ಟ್ರಿಫಿಕೇಶನ್ ಮಾರ್ಗ ಪೂರ್ಣಗೊಳಿಸುವ ಗುರಿ ಹೊಂದಿದ್ದಾಗಿ ಹೇಳಿದರು.
ನೈಋತ್ಯ ರೈಲ್ವೆ ವಲಯ ಈ ಬಾರಿಯ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 9,487.88 ಕೋಟಿ ರೂ. ಒಟ್ಟಾರೆ ಆದಾಯ ಗಳಿಸಿದ್ದು, ಕಳೆದ ಆರ್ಥಿಕ ವರ್ಷದ 8,489.67 ಕೋಟಿ ರೂ. ಆದಾಯಕ್ಕೆ ಹೋಲಿಸಿದರೆ, ಈ ವರ್ಷ ಶೇ. 11.76ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.
ರೈಲುಗಳ ಸಮಯ ಪರಿಪಾಲನೆಯಡಿ ರೈಲ್ವೆ ಸಚಿವಾಲಯ ನೈಋತ್ಯ ರೈಲ್ವೆಗೆ ಶೇ. 90ರಷ್ಟು ಗುರಿ ನೀಡಿದ್ದು, ಶೇ. 89.37ರಷ್ಟು ಗುರಿ ಸಾಧಿಸಲಾಗಿದೆ.
6 ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳನ್ನಾಗಿ ಬದಲಾಯಿಸಲಾಗಿದೆ. 6 ಎಕ್ಸ್​ಪ್ರೆಸ್ ರೈಲುಗಳನ್ನು ಸೂಪರ್​ಫಾಸ್ಟ್ ರೈಲುಗಳನ್ನಾಗಿ ಪರಿವರ್ತಿಸಲಾಗಿದೆ.
27 ಮೆಮು ರೈಲುಗಳ ಸಂಚಾರಕ್ಕೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವಾಲಯದಿಂದ ಅನುಮೋದನೆ ದೊರೆತ ತಕ್ಷಣ ಅವುಗಳ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದರು.
ಸಿಪಿಆರ್​ಒ ಡಾ. ಮಂಜುನಾಥ ಕನಮಡಿ ಹಾಗೂ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net