ಪರವಾನಗಿಗಿಂತ ಹೆಚ್ಚಿನ ಎಂ. ಸ್ಯಾಂಡ್​ ಸಾಗಿಸುತ್ತಿದ್ದ 3 ಟಿಪ್ಪರ್​ ವಶ

3 ಟಿಪ್ಪರ್​ ಜಪ್ತಿ
3 ಟಿಪ್ಪರ್​ ಜಪ್ತಿ
Published on
ಧಾರವಾಡ: ಪರವಾನಗಿಗಿಂತ ಹೆಚ್ಚಿನ ಎಂ. ಸ್ಯಾಂಡ್​ ಸಾಗಿಸುತ್ತಿದ್ದ 3 ಟಿಪ್ಪರ್​ಗಳ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ. ಗದಗ ಜಿಲ್ಲೆ ಮುಂಡರಗಿಯಿಂದ ಧಾರವಾಡ ತಾಲೂಕಿನ ಹೊಸವಾಳಕ್ಕೆ 3 ಟಿಪ್ಪರ್​ಗಳಲ್ಲಿ ಎಂ. ಸ್ಯಾಂಡ್​ ಸಾಗಿಸಲಾಗುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ್​ ಹಾಗೂ ತಂಡ ದಾಳಿ ನಡೆಸಿ ತಪಾಸಣೆ ಮಾಡಿದಾಗ ಪರವಾನಗಿಗಿಂತ ಹೆಚ್ಚಿನ ಎಂ. ಸ್ಯಾಂಡ್​ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಿತಿನ್​ ಉಪ್ಪಾರ ಎಂಬುವರ 3 ಟಿಪ್ಪರ್​ಗಳ್ನು ಜಪ್ತಿ ಮಾಡಿ ಗರಗ ಪೊಲೀಸ್​ ಠಾಣೆಗೆ ಒಪ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net