ಮಹಾನಗರ ಪಾಲಿಕೆ ಹುಬ್ಬಳ್ಳಿ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಜ್ಯೋತಿ ಪಾಟೀಲ ಮಾತನಾಡಿದರು. ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಜರಿದ್ದರು. water
ಇನ್ನುಳಿದ ವಾರ್ಡ್ಗಳಲ್ಲಿ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.
324 ಕೋಟಿ ರೂ. ನೀರಿನ ಕರ ಬಾಕಿ ಇದೆ.
ಇಲ್ಲಿನ ಮೇಯರ್ ಚೇಂಬರ್ನಲ್ಲಿ ಬುಧವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, ಈ ಕುರಿತು ರ್ಚಚಿಸುವುದಕ್ಕಾಗಿಯೇ ಫೆ. 10ರಂದು ವಿಶೇಷ ಸಾಮಾನ್ಯ ಸಭೆ ಆಯೋಜಿಸಲಾಗಿದೆ ಎಂದರು.
ಹಲವಾರು ವಾರ್ಡ್ಗಳಿಗೆ ನಿರಂತರ ನೀರು ಪೂರೈಕೆಗಾಗಿ ಪೈಪ್ಲೈನ್ ಅಳವಡಿಸಲಾಗಿದ್ದರೂ, ಅಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು.
ಈ ಎಲ್ಲ ವಾರ್ಡ್ಗಳಿಗೆ ಮಾರ್ಚ್ನಿಂದ ನಿರಂತರ ನೀರು ಪೂರೈಸಲಾಗುವುದು. ಇನ್ನುಳಿದ ವಾರ್ಡ್ಗಳಲ್ಲಿ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
ಈಗಾಗಲೇ ಎಲ್ ಆಂಡ್ ಟಿ ಕಂಪನಿ ಹುಬ್ಬಳ್ಳಿ- ಧಾರವಾಡದಲ್ಲಿ 24 ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ವಿುಸುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ.
ಅಮ್ಮಿನಬಾವಿಯಿಂದ ಹುಬ್ಬಳ್ಳಿಗೆ ಪ್ರತ್ಯೇಕ ಪೈಪ್ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಾಯಾಪುರ ಬಳಿ ಅಲ್ಪಮಟ್ಟಿನ ಕಾಮಗಾರಿ ಬಾಕಿ ಇದೆ ಎಂದರು.
ಅಮ್ಮಿನಬಾವಿಯಿಂದ 18 ಎಂಎಲ್ಡಿ ನೀರು ನೇರವಾಗಿ ಧಾರವಾಡಕ್ಕೆ ಹಾಗೂ 25 ಎಂಎಲ್ಡಿ ನೀರು ಹುಬ್ಬಳ್ಳಿಗೆ ಪೂರೈಕೆಯಾಗಲಿದೆ ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 324 ಕೋಟಿ ರೂ. ನೀರಿನ ಕರ ಬಾಕಿ ಇದೆ. ಇದರಲ್ಲಿ ಗೃಹ ಬಳಕೆಯದ್ದೇ 170 ಕೋಟಿ ರೂ. ಬಾಕಿ ಇದೆ.
ಈ ಎಲ್ಲ ಬಾಕಿ ಹಣ ಪಾವತಿಗೆ ಒನ್ ಟೈಮ್ ಸೆಟ್ಲಮೆಂಟ್ (ಒಟಿಎಸ್) ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಮುಂಬರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಪಿಜಿ ಹಾಸ್ಟೆಲ್, ಕೋಚಿಂಗ್ ಸೆಂಟರ್, 24/7 ಗ್ರಂಥಾಲಯಗಳಿಗೆ ಪೂರೈಕೆ ಮಾಡುವ ನೀರಿಗೆ ವಾಣಿಜ್ಯ ದರದಡಿ ಶುಲ್ಕ ಆಕರಿಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.
ಎಲ್ಇಡಿ ಬೀದಿ ದೀಪಗಳ ಪ್ರಾತ್ಯಕ್ಷಿಕೆ ಅಳವಡಿಕೆ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ಎಷ್ಟು ವಾಟ್ನ ದೀಪ ಅಳವಡಿಸಬೇಕು ಎಂಬ ಪ್ರಯೋಗ ನಡೆಯುತ್ತಿದೆ. ಶೀಘ್ರ ಎಲ್ಲ ವಾರ್ಡ್ಗಳಲ್ಲಿ ಎಲ್ಇಡಿ ಬೀದಿ ದೀಪ ಅಳವಡಿಸಲಾಗುವುದು ಎಂದು ಹೇಳಿದರು.
ಸ್ವಚ್ಛ ಸಂಡೇ ಯೋಜನೆ ಅಡಿ ಒಂದೊಂದು ವಾರ್ಡ್ನಲ್ಲಿ ಭಾನುವಾರದಂದು ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದಷ್ಟು ಶೀಘ್ರ ಈ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಇತರರು ಇದ್ದರು.