

ಧಾರವಾಡ: ಮನೆಯೊಂದರ ಒಳಗಡೆಯಿಂದ ನೀರಿನೊಂದಿಗೆ ರಕ್ತ ಹರಿದು ಬರುವುದನ್ನು ನೋಡಿ ಜನರು ಹೌಹಾರಿದ ಘಟನೆ ಧಾರವಾಡದ ಮಣಕಿಲ್ಲಾ ಹರಿಮಂದಿರ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಹತ್ತಕ್ಕೂ ಹೆಚ್ಚು ಮನೆಗಳಿಂದ ರಕ್ತ ಮಿಶ್ರಿತ ನೀರು ಹರಿದು ಬರುತ್ತಿದೆ. ಡ್ರೈನೇಜ್ ಉಕ್ಕಿ ಹರಿಯುತ್ತಿರುವ ಕಾರಣ ಡ್ರೈನೇಜ್ ನೀರಿನಲ್ಲಿ ಸೇರಿದ್ದ ರಕ್ತವೂ ಹರಿದು ಹೊರ ಬರುತ್ತಿದ್ದು, ಬೆಳ್ಳಂಬೆಳಗ್ಗೆ ಇದನ್ನು ನೋಡಿದ ಜನರು ಹೆದರಿದ್ದಾರೆ.
ಅಂದಹಾಗೆ ರಕ್ತ ಪ್ರಾಣಿಗಳ ಮಾಂಸದ ಮಾರ್ಕೆಟ್‌ನಿಂದ ಡ್ರೈನೇಜ್‌ಗೆ ಸೇರುತ್ತಿದೆ. ಇದೀಗ ಅದೇ ರಕ್ತ ಡ್ರೈನೇಜ್ ಓವರ್ ಫ್ಲೋದಿಂದ ಮನೆಗಳತ್ತ ಬರುತ್ತಿರುವುದರಿಂದ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)