ಚಿತ್ತಾಪುರದಲ್ಲಿ ಕೋಲಿ ಸಮಾಜದ ಧರಣಿ ಅ.9ಕ್ಕೆ

Ramling Banar
Published on

ಚಿತ್ತಾಪುರ: ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬೆಳಗ್ಗೆ 10.30ಕ್ಕೆ ಲಾಡ್ಜಿಂಗ್ ಕ್ರಾಸ್ ಬಳಿ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ್ ಹೇಳಿದರು.

ದೇವಾನಂದ ಆತ್ಮಹತ್ಯೆ ಕುರಿತು ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಾಗಿ ಮೂರು ತಿಂಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಈ ಪ್ರಕರಣವನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಂಭೀರ ಪರಿಗಣಿಸಬೇಕು. ತಪ್ಪಿತಸ್ಥ ರಾಜಕೀಯ ಮುಖಂಡರು ಹಾಗೂ ಆರಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಮಾಜದ ಯುವ ಘಟಕ ತಾಲೂಕು ಅಧ್ಯಕ್ಷ ಗುಂಡು ಐನಾಪುರ, ಪ್ರಮುಖರಾದ ಮಲ್ಲಿಕಾರ್ಜುನ ಎಮ್ಮೆನೋರ, ಭೀಮರಾಯ ಹೋತಿನಮಡಿ, ತಮ್ಮಣ್ಣ ಡಿಗ್ಗಿ, ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ಶರಣು ಸಿದ್ರಾಮಗೋಳ, ಮಹೇಶ ಸಾತನೂರ, ಮಹಿಪಾಲ್ ಮೂಲಿಮನಿ, ಮಹಾದೇವ ಮುಗುಟಿ, ಸಾಬಣ್ಣ ಹೋಳಿಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net