ಧರಣಿ ಹಿಂದಕ್ಕೆ ಪಡೆದ ಗ್ರಾಮಸ್ಥರು

Published on

ಗುರುಗುಂಟಾ: ಸಮೀಪದ ಗೌಡೂರು ಗ್ರಾಮ ಹಾಗೂ ಕೃಷಿ ಚಟುವಟಿಕೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಬುಧವಾರ ಸಂಜೆ ವಿದ್ಯುತ್ ವಿತರಣಾ ಶಾಖೆಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ನಂತರ ಜೆಸ್ಕಾಂನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಇಲಾಖೆಯ ನಿಯಮದಂತೆ ತಿಂಗಳ ಕಾಲಮಿತಿಯೊಳಗೆ ಇಲಾಖೆಯಿಂದ ಆರ್‌ಆರ್ ಸಂಖ್ಯೆ ಪಡೆಯಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು. ಷರತ್ತು ವಿಧಿಸಿ ಗೌಡೂರು ಐಪಿ ಸೆಟ್ ಫೀಡರ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ಪಟ್ಟು ಸಡಲಿಸಿದ ಗ್ರಾಮಸ್ಥರು ಧರಣಿ ಹಿಂಪಡೆದರು. ಜೆಸ್ಕಾಂ ಎಇಇ ಸಲೀಮ್ ಪಾಷಾ, ಜೆಇ ಬಸವರಾಜ, ಜೆಸ್ಕಾಂ ಸೆಕ್ಷನ್ ಆಫೀಸರ್ ನಾಗಪ್ಪ ಇದ್ದರು.

ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ, ತಾಲೂಕು ಅಧ್ಯಕ್ಷ ಪ್ರಸಾದ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ಹೋಬಳಿ ಅಧ್ಯಕ್ಷ ರಾಮಣ್ಣ, ವಿಜಯಕುಮಾರ ನಾಯಕ, ರಾಮಣ್ಣ ಗೌಡೂರು, ರುದ್ರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net