

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ತಾಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗುರಿಪಳ್ಳ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಜಯನಗರ ಸಂಯುಕ್ತ ಆಶ್ರಯದಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಭಜನಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆಯ ಸಂಚಾಲಕ ನಾಮ್‌ದೇವ್ ರಾವ್ ಪದಗ್ರಹಣ ಉದ್ಘಾಟಿಸಿ ಮಾತನಾಡಿ, ಕೃಷಿಯಿಂದ ಹಿಡಿದು, ಮಕ್ಕಳ ಉನ್ನತ ಶಿಕ್ಷಣ, ಮನೆಯ ಅಭಿವೃದ್ಧಿ ಹಾಗೂ ದುಶ್ಚಟಮುಕ್ತ ಸಮಾಜ ನಿರ್ಮಿಸುವ ಕ್ರಾಂತಿಯೊಂದಿಗೆ 1982ರಲ್ಲಿ ಯೋಜನೆ ಹುಟ್ಟಿಕೊಂಡಿತು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕನಸು ಗ್ರಾಮೀಣ ಜನರ ಅಭಿವೃದ್ಧಿಯ ಮೂಲಕವಾಗಿ ನನಸಾಗಿದೆ ಎಂದರು.
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಕುಮಾರ್, ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಲೀಲಾವತಿ ಮಾತನಾಡಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್ ನೂತನ ಅಧ್ಯಕ್ಷರಿಗೆ ಎಲೆ ಅಡಕೆ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಿದರು. ಬೇಬಿ ಉಮೇಶ್ ಅಧ್ಯಕ್ಷತೆ ವಹಿಸಿದರು.
ಬೇಬಿ ಉಮೇಶ್ ಹಾಗೂ ಸುಮಾ ಸಂದೀಪ್ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಮಾಜಿ ಅಧ್ಯಕ್ಷ ಯಶೋಧರ ಗೌಡ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಚಂದ್ರಕಲಾ ವಂದಿಸಿದರು. ಯೋಜನೆಯ ಕೃಷಿ ಅಧಿಕಾರಿಗಳಾದ ರಾಮ್ ಕುಮಾರ್ ಹಾಗೂ ಮೇಲ್ವಿಚಾರಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.
ನೂತನ ಅಧ್ಯಕ್ಷ ಗುರುರಾಜ್, ಒಕ್ಕೂಟದ ಪದಾಧಿಕಾರಿಗಳಾದ ಗೀತಾ, ಮಮತಾ, ಸುಮಿತಾ, ಸುಧಾ, ಬಾಬು ಬಂಗೇರ, ಚಂದ್ರಕಲಾ, ಚಿತ್ರ ನಾರಾಯಣ ಗೌಡ, ಹರೀಶ್ ಗೌಡ, ರಘುನಾಥ ಪೂಜಾರಿ, ಕಲಾವತಿ ಶೆಟ್ಟಿಗಾರ್, ರಾಮಣ್ಣ ಪೂಜಾರಿ, ಅನಿತಾ ಕೊಡೆಕಲ್, ಗೀತಾ ವಿ.ನಾಯ್ಕ, ಸುಭಾಷ್ ಜಯನಗರ, ಕುಶಾಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಯ ಕಾರ್ಯಕ್ರಮಗಳು ಗ್ರಾಮೀಣಮಟ್ಟದಲ್ಲಿ ಅತ್ಯುತ್ತಮವಾಗಿ ಅನುಷ್ಠಾನಿಸಲು ಪ್ರತಿಯೊಬ್ಬರ ಸಹಕಾರದಿಂದ ಸಾಧ್ಯವಾಗಿದೆ. ಯೋಜನೆಗೆ ಎಲ್ಲ ಪಾಲುದಾರ ಸದಸ್ಯರು, ಊರಿನವರು ಉತ್ತಮ ಸಹಕಾರವನ್ನು ನೀಡುತ್ತಿದ್ದಾರೆ. ಮುಂದಕ್ಕೂ ಹೆಚ್ಚಿನ ಸಹಕಾರ ನೀಡಿದಾಗ ಹೆಚ್ಚಿನ ಅಭಿವೃದ್ಧಿ ಸಾಧ್ಯ. - ಸುರೇಂದ್ರ ಕುಮಾರ್, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ