ಬಡ ಜನರಿಗೆ ಸ್ವಾವಲಂಬಿ ಬದುಕು ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

SKDRDP-Program
Published on

ಕಾರವಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ಮಾಡುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಕಾರವಾರ ತಾಲೂಕು ಸದಾಶಿವಗಡ ವಲಯದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಮಾಜಾಳಿ ವಿಶ್ವಕರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದರಿಂದ ಜನರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜತೆಗೆ ಜನರ ಸ್ವಾವಲಂಭನೆ ಮತ್ತು ಅಭಿವೃದ್ಧಿಗೆ ವರದಾನವಾಗಿದೆ ಎಂದರು.
ಯೋಜನೆಯ ಉಕ ಜಿಲ್ಲಾ ಕರಾವಳಿ ವಿಭಾಗದ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಬಡತನಕ್ಕೆ ಮೂಲ ಕಾರಣ ಸೋಮಾರಿತನ, ಮೂಡನಂಬಿಕೆ, ದುಂದುವೆಚ್ಚ, ದುಶ್ಚಟಗಳೇ ಆಗಿವೆ. ಸಾಮೂಹಿಕ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ಮಾಡಿದ್ದು, ನಾವೆಲ್ಲರೂ ಅಭಿವೃದ್ಧಿಯ ಸಂಕಲ್ಪ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಗಂಗಾಧರ ಭಟ್, ಸಾಮೂಹಿಕ ಸತ್ಯ ನಾರಾಯಣ ಪೂಜೆ ಸಮಿತಿಯ ಅಧ್ಯಕ್ಷೆ ಸುಜಾತಾ ಶ್ರೀಕಾಂತ ವೇರ್ಣೆಕರ್, ಮಾಜಾಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದನ ಸಾವಂತ ವೇದಿಕೆಯಲ್ಲಿದ್ದರು. ಯೋಜನಾಕಾರಿ ವಿನಾಯಕ ನಾಯ್ಕ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಶಂಭು ಪಟಗಾರ, ಕೃಷಿ ಮೇಲ್ವಿಚಾರಕ ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಕಾರಿ ಸುಜಾತಾ, ಸೇವಾಪ್ರತಿನಿಗಳಾದ ರೇಷ್ಮಾ, ಸಹೇರಾ ಬಾನು, ಶಿಲ್ಪಾ, ಸೀತಾ, ಪ್ರತಿಕ್ಷಾ, ಅಮಿಶಾ, ಸೈದಮ್ಮ, ಪೂಜೆಯ ಕಾರ್ಯದರ್ಶಿ ವಿನಾಯಕ ನಾಯ್ಕ, ಶಂಭೂ ಪಟಗಾರ, ಕೋಶಾಽಕಾರಿ ದಿವ್ಯಲಕ್ಷ್ಮೀ,ಸದಸ್ಯ ರವಿಕಾಂತ ಪಾಲ್ಗೊಂಡಿದ್ದರು.
ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾತಿಯಾದ ವೀಲ್ ಚೇರ್ ಹಾಗೂ ಅಸ್ನೋಟಿ ಗ್ರಾಮದ ರುದ್ರ ಭೂಮಿ ಅಭಿವೃದ್ಧಿಗೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ರೂ.2.50 ಲಕ್ಷದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net