ಮಹಿಳೆಯರ ಉನ್ನತಿಗೆ ಶ್ರಮಿಸುತ್ತಿರುವ ಧರ್ಮಸ್ಥಳ ಸಂಘ: ಬಿಸಲಹಳ್ಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Varamhalaxmi Pooja
Published on

ಬ್ಯಾಡಗಿ: ರಾಜ್ಯದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಹತ್ತಾರು ಚಟುವಟಿಕೆ ಮೂಲಕ ಮಹಿಳೆಯರ ಸಬಲೀಕರಣಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಶ್ರೀ ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಹೇಳಿದರು.

ತಾಲೂಕಿನ ಬಿಸಲಹಳ್ಳಿ ಗ್ರಾಮದ ಶ್ರೀ ಹೊಳಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವರಮಹಾಲಕ್ಷ್ಮೀ ಪೂಜೆ ಅಂಗವಾಗಿ ಏರ್ಪಡಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇದ್ರ ಹೆಗ್ಗಡೆ ಹಾಗೂ ಧರ್ಮಪತ್ನಿ ಹೇಮಾವತಿಯವರು ರಾಜ್ಯದ ಮಹಿಳೆಯರನ್ನು ವಿವಿಧ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಹೊರತರಬೇಕು. ಆರ್ಥಿಕವಾಗಿ ಎಲ್ಲರೂ ಸಬಲರಾಗಬೇಕು. ಉದ್ಯೋಗದಲ್ಲಿ ತೊಡಗಿಸಿಕೊಂಡು ಆಯಾ ಪ್ರದೇಶದಲ್ಲಿ ಕುಟುಂಬ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳ ಮೂಲಕ ಆರ್ಥಿಕ ಸಹಕಾರ ನೀಡುತ್ತಿದ್ದಾರೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಶಾಂತಾಮಣಿ ಮಾತನಾಡಿ, ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಆರ್ಥಿಕವಾಗಿ ಧರ್ಮಸ್ಥಳ ಸಂಘ ಮಹಿಳೆಯರಿಗೆ ಬೆನ್ನೆಲುಬಾಗಿ ಸಹಕಾರ ನೀಡುತ್ತಿದೆ. ದೇಶದ ಬಹುತೇಕ ಜನರು ಕೃಷಿಯನ್ನು ನಂಬಿದ್ದು, ಕೃಷಿಗೆ ಹೆಚ್ಚು ಉತ್ತೇಜನ ನೀಡಿದಲ್ಲಿ ಸಮಗ್ರ ದೇಶದ ಅಭಿವೃದ್ಧಿ ಸಾಧ್ಯವೆಂಬ ಧ್ಯೇಯಕ್ಕೆ ಸಂಸ್ಥೆ ಬದ್ಧವಾಗಿರುವುದು ಶ್ಲಾಘನೀಯ ಎಂದರು.

ಗಾ.ಪಂ. ಅಧ್ಯಕ್ಷ ಚಿನ್ನಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಹಿರಿಯರಾದ ಶೇಖರಗೌಡ ಗೌಡ್ರ, ಭೀಮಣ್ಣ ಆಣೂರ, ತಿರಕನಗೌಡ ಬೆಳಕೇರಿ, ನಿರ್ಮಲಾ ಕೊಲ್ಲಾಪುರ, ವೀರನಗೌಡ ಎಸ್.ಜಿ., ನಿಂಗಪ್ಪ ಎಲಿಗಾರ, ಬಸವಂತಪ್ಪ ಮುಚ್ಚಟ್ಟಿ, ಈರಣ್ಣ ಗೌಡ್ರ, ಶಂಕ್ರಪ್ಪ ದೇವರಗುಡ್ಡ, ಯೋಜನಾಧಿಕಾರಿ ರಘುಪತಿ, ವಲಯದ ಮೇಲ್ವಿಚಾರಕರಾದ ಉಮಾ ಸತೀಶ, ಎಸ್. ನೇತ್ರಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net