

ಅಂಕಲಗಿ: ಸಾಮಾಜಿಕ ಕಳಕಳಿ ಮತ್ತು ಜನ ಸಮುದಾಯಗಳ ಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಕಾರ್ಯ ಶ್ಲಾಘನೀಯ ಎಂದು ತವಗ ಮೇಲಿನಮಠದ ಬಾಳಯ್ಯ ಗಂಗಾಧರ ಸ್ವಾಮೀಜಿ ಹೇಳಿದರು. ಸಮೀಪದ ಈರನಟ್ಟಿ ಗ್ರಾಮದಲ್ಲಿ ಈಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಗೋಕಾಕ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ವರಮಹಾಲಕ್ಷ್ಮೀ ಸಾಮೂಹಿಕ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ ಅಧ್ಯಕ್ಷತೆ ವಹಿಸಿದ್ದರು. ಮಲಗೌಡ ದೂಳಾಯಿ, ಗೌಡಪ್ಪ ಹೊಳೆಯಾಚಿ, ಕಸ್ತೂರಿ ಬಾದರವಾಡಿ, ದಾಸನಟ್ಟಿಯ ತಿಪ್ಪಪ್ವ ಪಾಟೀಲ, ಧರ್ಮೇಂದ್ರ ಎನ್.ಜಿ. ಬಸವಣ್ಣಿ ಕರಿ, ಮಾರುತಿ ಆಲೂರ, ಕಾಶಪ್ಪ ಸಜಲಿ, ಅಡಿವೆಪ್ಪ ಹಟ್ಟಿಗೌಡರ, ಗೌರವ್ವ ಏಳಲ್ಲಿ, ರಮೇಶ ಕೋಣಿ, ಆನಂದ ಪೂಜೇರಿ, ಮಹಾದೇವಿ ಮುಟ್ಟವ್ವಗೋಳ, ಶಿವಕ್ಕ ನವನಿ, ಸಂಘದ ಜಿಲ್ಲಾ ನಿರ್ದೇಶಕ ಲವಕುಮಾರ ಇತರರು ಇದ್ದರು.