ಎಲ್ಲ ದೇವಾಲಯಗಳಿಗೆ ಧರ್ಮಸ್ಥಳ ಮಾದರಿ

kachur
ಬಾರಕೂರು ಕಚ್ಚೂರುಶ್ರೀ ಮಾಲ್ತೀದೇವಿ, ಬಬ್ಬು ಸ್ವಾಮಿ ಮೂಲಕ್ಷೇತ್ರದ ಸಭಾಭವನದಲ್ಲಿ ಜರುಗಿದ 1874ನೇ 8 ದಿನದ ಮದ್ಯವರ್ಜನ ಶಿಬಿರವನ್ನು ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು ಉದ್ಘಾಟಿಸಿದರು
Published on

ಬ್ರಹ್ಮಾವರ: ಪ್ರಪಂಚದಲ್ಲಿ ದೇವಾಲಯ ಸೇವಾಲಯವಾಗಿ ರೂಪುಗೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯ ಎಲ್ಲ ದೇವಾಲಯಗಳಿಗೆ ಮಾದರಿಯಾಗಿದೆ ಎಂದು ಕಚ್ಚೂರು ಮಾಲ್ತೀದೇವಿ ದೇವಸ್ಥಾನ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು ಹೇಳಿದರು.

ಬಾರಕೂರು ಕಚ್ಚೂರುಶ್ರೀ ಮಾಲ್ತೀದೇವಿ, ಬಬ್ಬು ಸ್ವಾಮಿ ಮೂಲಕ್ಷೇತ್ರದ ಸಭಾಭವನದಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಬಾರಕೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬಾರಕೂರು ರೋಟರಿ, ನಾನಾ ಸಂಘ-ಸಂಸ್ಥೆ ಸಹಕಾರದಲ್ಲಿ ಗುರುವಾರ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಿತಿ ಗೌರವಾಧ್ಯಕ್ಷ ಉಮೇಶ್ ಆಚಾರ್ಯ, ಅಧ್ಯಕ್ಷ ಕೆ.ಬಾಬು ನಾಯ್ಕ ಕೂಡ್ಲಿ, ಶ್ರೀನಿವಾಸ ಉಡುಪ ಕೂಡ್ಲಿ, ರಮೇಶ್ ಭಟ್ ನಾಯರ್ ಬೆಟ್ಟು, ಶೇಡಿಕೊಡ್ಲು ವಿಠಲ್ ಶೆಟ್ಟಿ, ಬಾರಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ, ಲಕ್ಷ್ಮಣ ನಾಯ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ., ಅಚ್ಯುತ ಪೂಜಾರಿ, ಗೌರಿ ಪೂಜಾರಿ, ಫಿಲೋಮಿನಾ ಡಿಸೋಜ, ಇನ್ನಿತರರು ಉಪಸ್ಥಿತರಿದ್ದರು. ಸಚಿನ್ ಸ್ವಾಗತಿಸಿದರು. ಶಿಬಿರಾಧಿಕಾರಿ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಎಸ್ ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net