

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನಗೊಂಡಿತು.
ನಾಡಿನೆಲ್ಲೆಡೆಯಿಂದ ಬಂದ ಲಕ್ಷಕ್ಕೂ ಮಿಕ್ಕಿದ ಭಕ್ತಾದಿಗಳು ಲಕ್ಷದೀಪೋತ್ಸವ ವೀಕ್ಷಿಸಿ ಧನ್ಯತೆ ಪಡೆದರು. ಕಲಾವಿದರು ಶ್ರದ್ಧಾ-ಭಕ್ತಿಯಿಂದ ವೈವಿಧ್ಯಮಯ ಕಲಾಸೇವೆ ಅರ್ಪಿಸಿದರು. ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಅಷ್ಟವಿಧಾರ್ಚನೆ ಪೂಜೆಯೊಂದಿಗೆ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಿತು. ವಸ್ತುಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ದೀಪಾ ಭಟ್ ನಿರ್ದೇಶನದಲ್ಲಿ ನವರಸ ನಾಟ್ಯ ಶಿವ ನೃತ್ಯರೂಪಕ ನಡೆಯಿತು.