

ಕೋ.ಶಿವಾಪುರ: ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಧರ್ಮಸ್ಥಳ ಸಂಸ್ಥೆ ಯೋಜನೆ ಸಹಕಾರಿಯಾಗಿವೆ ಎಂದು ಪಿಡಿಒ ಸಂಕಪ್ಪ ಪಡಿ ಹೇಳಿದರು.
ಗ್ರಾಮದ ಹಿರೇಮಠ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾರಿ ಚುಕ್ಕೆ ಕಸೂತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಸತೀಶ ಡಿ., ಜ್ಞಾನ ವಿಕಾಸ ತರಬೇತಿ ಸಂಸ್ಥೆ ಪ್ರಾಚಾರ್ಯ ಜಗದೀಶ ಅಲ್ಸಯ್ಯನವರ ಮಾತನಾಡಿದರು.
ಪ್ರೊ.ಗೀತಾ ಎಸ್., ಎಸ್.ಎಂ.ಪಾಟೀಲ, ವಲಯ ಮೇಲ್ವಿಚಾರಕ ಸಂಭಾಜಿ ಎಸ್., ಸಂಪನ್ಮೂಲ ವ್ಯಕ್ತಿ ಕಾವೇರಿ, ಸೇವಾಪ್ರತಿ ನಿಧಿಗಳಾದ ಗುರುದೇವಿ ಹೂಗಾರ, ಸುನೀತಾ ಕೌಜಲಗಿ ಇತರರಿದ್ದರು.